ಕಲರವ

– ಹೇಮಾ ಪವಾರ್, ಬೆಂಗಳೂರು

ಸ್ವಾತಂತ್ರ್ಯದ ದಿನದಲ್ಲಿ ಬರೆಯಬಹುದಾದ ಮಾಡಬಹುದಾದ ವಿಷಯಗಳು ನನಗೆ
ಸ್ಪಷ್ಟವಾಗಿಲ್ಲವಾದರೂ ಈ ಸಲದ ಸ್ವಾತಂತ್ರ್ಯ ದಿನ ನನ್ನ ಪಾಲಿಗೆ ಅತಿ ಮುಖ್ಯ ದಿನ
ಎನಿಸಿದ್ದರಿಂದ ಬರೆಯುತ್ತಿದ್ದೇನೆ. ಮೊದಲೆಲ್ಲಾ ಇತರೆ ರಜದ ದಿನಗಳ ಹಾಗೆ
ಸ್ವಾತಂತ್ರ್ಯದಿನಾಚರಣೆಯೂ ಮುಗಿದು ಹೋಗುತ್ತಿತ್ತು ಮತ್ತು ಹಾಗೆ ಕಳೆದುಬಿಟ್ಟಿದ್ದರ
ಬಗ್ಗೆ ಸಣ್ಣದೊಂದು ಗಿಲ್ಟ್ ಮನಸಲ್ಲುಳಿದುಬಿಡುತ್ತಿತ್ತು, ಈ ಸಲ ಹಾಗಾಗಲಿಲ್ಲವೆಂಬುದೇ
ಖುಷಿಯ ವಿಚಾರ. ನಾನು ಬೆಳ್ಳಂಬೆಳಿಗ್ಗೆ ಎದ್ದು ರೆಡಿಯಾಗಿ ಸ್ಯಾಟಲೈಟ್ ಬಸ್ಟಾಪ್
ತಲುಪಿಕೊಂಡು, ಇಡ್ಲಿ ತಿಂದು, ಬಿಸೀ ಬಿಸಿ ಕಾಫಿ ಕಪ್ ಹಿಡಿದು ವಾಚ್ ನೋಡಿಕೊಂಡಾಗ ಸಮಯ
ಆರುಗಂಟೆ. ಅಲ್ಲಿಂದ ನನ್ನ ಪಯಣ ಸಾಗಿದ್ದು ಮದ್ದೂರಿನ ಹತ್ತಿರವಿರುವ ನಂಬಿನಾಯಕನಹಳ್ಳಿ
ಎಂಬ ಗ್ರಾಮಕ್ಕೆ. ಹಳ್ಳಿಗಳು ನನಗೇ ಪ್ರತಿ ವಿಷಯದಲ್ಲೂ ವಿಸ್ಮಯದ ಸಂತೆ, ದೊಡ್ಡ ದೊಡ್ಡ
ಹೆಂಚಿನ ಮನೆಗಳು, ಮನೆಯಲ್ಲೇ ಸಾಕಿರುವ ರೇಷ್ಮೆ ಹುಳುಗಳು, ಆಡು, ಕುರಿ, ಹಸು, ಎತ್ತು,
ಎಮ್ಮೆ, ಕೋಳಿ ಮತ್ತು ಅವೆಲ್ಲಕ್ಕೂ ಮನೆಮಂದಿ ಮಾಡುವ ಆರೈಕೆ, ಹಳ್ಳಿಯ ನಿರ್ಮಲ ಗಾಳಿ,india_flag_sketch1
ಹಸಿರು ಎಲ್ಲವೂ ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಒಂದು
ಅಪೂರ್ವ ಸೆಳೆತವನ್ನುಂಟು ಮಾಡುತ್ತದೆ. ಅಲ್ಲಿನ ಪರಿಚಿತರ ಮನೆ ಹೊಕ್ಕು ಎಲ್ಲರನ್ನು
ಮಾತಾಡಿಸುತ್ತಿದ್ದಾಗಲೇ ಟಿ.ವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮವೊಂದು ಗಮನ ಸೆಳೆಯಿತು,
ನಟಿ ರಮ್ಯ ಯಡಿಯೂರಪ್ಪನವರ ಸಂದರ್ಶನ ಮಾಡಿತ್ತಿದ್ದುದ್ದು. ಚಾನೆಲ್ ಸರ್ಫ್
ಮಾಡುತ್ತಿದ್ದ ಸಣ್ಣ ಹುಡುಗ ರಮ್ಯಳ ಮುಖ ನೋಡುತ್ತಿದ್ದ ಹಾಗೆ ನಿಲ್ಲಿಸಿದ,
ಪರವಾಗಿಲ್ವೆ ನಮ್ಮ ಮುಖ್ಯಮಂತ್ರಿಗಳು ಹೀರೋಯಿನ್ ರಿಗೆಲ್ಲಾ ಸಂದರ್ಶನ ಕೊಡುವ ಧೈರ್ಯ
ಮಾಡಿದ್ದಾರೆಂದು ನಾನೂ ಕಿವಿಗೊಟ್ಟೆ, ಆಕೆಯ ಪ್ರಶ್ನೆಗಳನ್ನು ಕೇಳುತ್ತಿದ್ದ ಹಾಗೇ
ನನಗೆ ಮೈ ಉರಿದು ಹೋಯಿತು, ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್
ಪೆಡಿಕ್ಯೂರ್ ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ? ಅರೆ ರಾಜ್ಯದ ಮುಖ್ಯ
ಮಂತ್ರಿಗಳಿಗೆ ಕೇಳುವ ಪ್ರಶ್ನೆಯಾ ಇದು?! ಇರಲಿ ಅದರ ಬಗ್ಗೆ ಮುಂದೆ ಬರೆಯುವೆ.

ಅಲ್ಲಿನ ವಾತಾವರಣ ಅನುಭವಿಸಿ ಖುಷಿ ಪಡಲು ಇನ್ನೊಂದು ಅವಕಾಶವೆಂಬಂತೆ ಪಕ್ಕದ ಹಳ್ಳಿಗೆ
ಹೋಗಬೇಕಿದ್ದ ಬಸ್ ಆ ದಿನ ನಾಪತ್ತೆಯಾಗಿತ್ತು, ಮೂರು ಕಿ.ಮೀ ನಷ್ಟು ದೂರವಿದ್ದ ಊರಿಗೇ
ನಡೆದೇ ಹೊರಟೆವು. ನನ್ನ ಜೊತೆಯಲ್ಲಿ ಬರುತ್ತಿದ್ದ ಗೆಳೆಯರೊಬ್ಬರೊಡನೆ ಹಳ್ಳಿಯ ಆಗು
ಹೋಗುಗಳ ಬಗ್ಗೆ, ಪಟ್ಟಣದ ಯಾಂತ್ರಿಕತೆಯ ಬಗ್ಗೆ ಲೋಕಾಭಿರಾಮವಾಗಿ ಮಾತು ಸಾಗಿತ್ತು.
ಮಾತು ಒಳ್ಳೆಯ ಬಿರುಸು ಪಡೆದು ನಾನು ಹಳ್ಳಿಯ ಜನರೆಲ್ಲ ನೆಮ್ಮದಿ ಉಳ್ಳವರೆಂದು
ಪಟ್ಟಣದವರ ಚೆನ್ನಾಗಿರುವಿಕೆ ಬರಿಯ ತೋರಿಕೆಯೆಂದೂ ಹೇಳಿದೆ. ಆದರೆ ಆ ಹಳ್ಳಿಯ ಜನರ ಇತರ
ಸ್ವಭಾವಗಳ ಬಗ್ಗೆ (ಅವರು ಸ್ವತಃ ಅದೇ ಊರಿನವರಾದ್ದರಿಂದ) ಹೇಳುತ್ತಾ, ಹೇಗೆ ರೈತನ
ಶ್ರಮವು ಸರಿಯಾದ ಅನುಕೂಲಗಳಿಲ್ಲದೆ ಇರುವುದರಿಂದ ಫಲ ದೊರೆಯದೇ ಪೋಲಾಗುತ್ತಿದೆ,
ಅನಕ್ಷರಸ್ಥ ಹಳ್ಳಿಗರು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದೆ ಅವುಗಳಿಗೆ
ವಿಮುಖರಾಗುತ್ತಾರೆ,  ಸಮಯ ಬಂದಾಗ ಒಗ್ಗಟ್ಟಾಗಿರಲು ಒದ್ದಾಡುತ್ತಾರೆ, ಕಷ್ಟವಿಲ್ಲದ
ಪಟ್ಟಣದ ಜೀವನಕ್ಕೆ ಹಾತೊರೆಯುತ್ತಾರೆ, ಸರ್ಕಾರವು ರೈತನಿಗೆ ಕೊಟ್ಟಿರುವ
ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಎಡವುತ್ತಾರೆ, ಸರ್ಕಾರವು ಒದಗಿಸಿರುವ
ಸೌಲಭ್ಯಗಳಲ್ಲಿ ರೈತನಿಗೆ ಆಗುತ್ತಿರುವ ಅನುಕೂಲವೆಷ್ಟು ಎಂದೆಲ್ಲ ವಿವರಿಸಿ ಒಂದು
ಉದಾಹರಣೆಯನ್ನು ಕೊಟ್ಟರು.

ಅದನ್ನು ವಿವರಿಸುವ ಮೊದಲು ಕಬ್ಬಿನ ಬಗ್ಗೆ ಸ್ವಲ್ಪ ವಿವರಣೆ ಅಗತ್ಯ. ಕಬ್ಬು ಒಂದು
ದೀರ್ಘ ಕಾಲದ ಬೆಳೆ, ಕಬ್ಬನ್ನು ಸಸಿಯಿಂದ ಕಟಾವಿನ ಹಂತದವರೆಗು ಬೆಳೆಯಲು ಕನಿಷ್ಟ
ಹನ್ನೊಂದು ತಿಂಗಳು ಬೇಕಾಗುತ್ತದೆ. ಕಬ್ಬು ಬೆಳೆಗಾರರಿಗೆ ಸರ್ಕಾರದಿಂದ ಸಾಲ
ದೊರೆಯುತ್ತದೆ. ಸರ್ಕಾರ, ರೈತನು ಬೆಳೆದ ಕಬ್ಬನ್ನು ತನ್ನದೇ ಅಧೀನದಲ್ಲಿರುವ
ಕಾರ್ಖಾನೆಗೆ ಕೊಡುವಂತೆ ಒಪ್ಪಂದ ಮಾಡಿಕೊಂಡು ಕಡಿಮೆ ಬಡ್ಡಿ ದರದಲ್ಲಿ ಸಾಲ
ಕೊಡುತ್ತದೆ. ನಿಗಧಿತ ಸಮಯದಲ್ಲಿ ಕಬ್ಬನ್ನು ಕಾರ್ಖಾನೆಗೆ ಒದಗಿಸದ ಪಕ್ಷದಲ್ಲಿ,
ಸಾಲವನ್ನು ಬಡ್ಡಿ ಮತ್ತು ಇತರೆ ದಂಡಗಳ ಸಮೇತ ಹಿಂತಿರುಗಿಬೇಕಾಗುತ್ತದೆ. ಇತ್ತ
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯ ಫೀಲ್ಡ್ ಮ್ಯಾನ್ ನಿಂದ ರೈತನ ಜಮೀನನ್ನು
ಪರಿಶೀಲಿಸಿ ಆ ಜಾಗದಲ್ಲಿ ಬೆಳೆಯಬಹುದಾದ ಕಬ್ಬನ್ನು ಅಂದಾಜಿಸಿ, ಕಟಾವಿನ ಸಮಯದಲ್ಲಿ
ಅಂದಾಜಿಸದಷ್ಟೇ ಕಬ್ಬು ಜಮೀನಿನಲ್ಲಿ ದೊರೆಯಬೇಕೆಂದು ಒಪ್ಪಂದದಲ್ಲಿ ಹೇಳಿರುತ್ತಾರೆ.
ಇದು ಸಾಲ ನೀಡಿ ರೈತನಿಂದ ಮರುಪಾವತಿ ಪಡೆಯುವುದಕ್ಕೆ ಸರ್ಕಾರ ಮಾಡಿರುವ ನಿಯಮ. ಆದರೆ
ಇಲ್ಲಾಗುವ ವ್ಯತಿರಿಕ್ತ ಪರಿಣಾಮಗಳೆಂದರೆ ಕಾರ್ಖಾನೆಯು ಒಂದೊಮ್ಮೆ ಫೀಲ್ಡ್ ಮ್ಯಾನ್
ನನ್ನು ಕಳಿಸಿ ಬೆಳೆಯನ್ನು ಅಂದಾಜಿಸಿದ ಮೇಲೂ ಕೆಲವೊಮ್ಮೆ ಸರಿಯಾದ ಸಮಯದಲ್ಲಿ ಕಟಾವು
ಮಾಡಿಸುವಲ್ಲಿ ತಡಮಾಡುತ್ತದೆ. (ಇದಕ್ಕೆ ಬೇರೆ ಬೇರೆಯದೇ ಕಾರಣಗಳಿರುತ್ತವೆ,
ಕಾರ್ಖಾನೆಯೂ ಅದಾಗಲೇ ಬೇರೆ ಕಡೆಯಿಂದ ಕಡಿಮೆ ಬೆಲೆಯ ಕಬ್ಬು ತರಿಸಿದ್ದರೆ,
ಕಾರ್ಖಾನೆಯಲ್ಲಿ ಕಡಿಮೆ ಕಬ್ಬನ್ನು ಅರೆಯುವ ಅವಕಾಶವಿದ್ದು ಜಾಸ್ತಿ ಜಮೀನಿಗೆ ಒಪ್ಪಂದ
ಮಾಡಿಕೊಂಡಿದ್ದರೆ, ಮಳೆ ಸರಿಯಾಗಿ ಆಗದೇ ಬೆಳೆಯೇ ತಡವಾಗಿದ್ದರೆ, ಇತ್ಯಾದಿ) ಆಗ ತಪ್ಪು
ಸರ್ಕಾರದ ಅಧೀನದಲ್ಲಿರುವ ಕಾರ್ಖಾನೆಯದ್ದೇ ಆದರೂ ರೈತ ತಾನು ಪಡೆದಿರುವ ಸಾಲಕ್ಕೆ
ಬಡ್ಡಿ ಕಟ್ಟಲೇ ಬೇಕು. ಸರ್ಕಾರದ್ದೇ ಅಧೀನದಲ್ಲಿರುವ ಎರೆಡು ವಿಭಾಗಗಳು ಒಂದಕ್ಕೊಂದು
ಪೂರಕವಲ್ಲದೆ ರೈತನಿಗೆ ಅನಾನುಕೂಲಕರವಾಗಿದೆ ಎಂಬುದು ಒಂದು ಅಂಶವಾದರೆ, ಒಂದೊಮ್ಮೆ
ಕಬ್ಬಿನ ಬೆಲೆಯಲ್ಲಿ ಏರಿಕೆ ಇದ್ದರೆ ಕೆಲವು ರೈತರು ಖಾಸಗೀ ಕಾರ್ಖಾನೆಯವರಿಗೆ
(ಬಂಡವಾಳಶಾಹಿಗಳಾದ ಖಾಸಗೀ ಕಾರ್ಖಾನೆಯವರು ತಮ್ಮ ಉತ್ಪನ್ನಗಳನ್ನು ಹೆಚ್ಚಿನ
ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಿ
ಹೆಚ್ಚಿನ ಬೆಲೆಗೆ ಮಾರುತ್ತಾರೆ) ತಮ್ಮ ಬೆಳೆಯನ್ನು ಹೆಚ್ಚಿನ ಬೆಲೆಗೆ ಮುಂಚೆಯೇ
ಮಾರಿಕೊಂಡು ಕಾರ್ಖಾನೆಯವರು ಬಂದಾಗ ಬೆಳೆಯಿಲ್ಲದ ಜಮೀನನ್ನು ತೋರಿಸುತ್ತಾರೆ.
ಕಾರ್ಖಾನೆಯಲ್ಲಾಗ ಕಬ್ಬಿನ ಪೂರೈಕೆ ಇಲ್ಲದೆ ಅರೆಯುವ ಮಶೀನುಗಳು ಬಳಕೆಯಾಗದೆ ಸರ್ಕಾರವು
ಅದರಲ್ಲಿ ತೊಡಗಿಸಿದ ಹಣ ಪೋಲಾಗುತ್ತದೆ. ಕಬ್ಬಿನ ಬೆಲೆಯ ಹೆಚ್ಚಳಕ್ಕೆ, ಸಾಲ ಮನ್ನಾ
ಮಾಡಲಿಕ್ಕೆ ಮುಷ್ಕರಗಳು ಹೂಡಲಾಗುತ್ತದೆಯಾದರೂ ನಿಜವಾಗಿಯೂ ತೊಡಕಾಗಿರುವ ಈ
ಕಾರಣಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ಮತ್ತು ಇತರ ಹೋರಾಟಗಾರರೆನಿಸಿಕೊಂಡವರು
ಸೋಲುತ್ತಾರೆ.

ಇದು ಗಮನಕ್ಕೆ ಬಂದ ಉದಾಹರಣೆಯಾಗಿದ್ದು ವ್ಯವಸಾಯ ಮಾಡುವಾಗ ಇಂತಹ ಹಲವು ಹತ್ತು
ಸಮಸ್ಯೆಗಳನ್ನು ರೈತನು ಎದುರಿಸಬೇಕಾಗುತ್ತದೆ. ರೈತನ ಜೀವನ ನಾನಂದುಕೊಂಡಷ್ಟು ಸುಲಭವೂ,
ಸಲೀಸೂ ಅಲ್ಲ ಎಂಬುದರ ಅರಿವಾಯಿತು. ಇವೆಲ್ಲದರ ಅರಿವು ಎಷ್ಟು ಜನಕ್ಕೆ ಇರುತ್ತದೆ?
ಅರಿವು ಮೂಡಿದ ಮೇಲಾದರೂ ಯುವಜನಾಂಗವೆನಿಸಿಕೊಂಡ ನಾವು ಮಾಡಬೇಕಾದದ್ದೇನು? ಇಂದಿನ ಯುವ
ಪೀಳಿಗೆ ವ್ಯವಸಾಯದಲ್ಲಿ ತೊಡಗುತ್ತಿಲ್ಲ ಎಂದು ದೂರುವ ಹಿರಿಯರಿಗೆ, ಇಲ್ಲಿನ
ಅನಾನುಕೂಲಗಳ ಅರಿವಿಲ್ಲವೇ? ಹಾಯಾದ ಪಟ್ಟಣದ ಜೀವನ ನೌಕರಿ ಎಲ್ಲವನ್ನು ಬಿಟ್ಟು
ವ್ಯವಸಾಯ ಮಾಡಲು ಯುವಕರಾದರೂ ಏಕೆ ಮುಂದೆ ಬಂದಾರು? ಮುಂದೆ ಬರುವಂತೆ ನಮ್ಮ ಸರ್ಕಾರ
ಏನು ಕ್ರಮ ತೆಗೆದುಕೊಂಡಿದೆ? ನಮ್ಮ ಶಿಕ್ಷಣ ಪದ್ದತಿಯು ರೈತರ ಸಮಸ್ಯೆಗಳುindia_flag_sketch1
ಯುವಜನಾಂಗಕ್ಕೆ ಎಷ್ಟರ ಮಟ್ಟಿಗೆ ಮುಟ್ಟಿಸುತ್ತಿದೆ? ನಗರದ ಜನತೆಗೆ ಹೀಗೆ
ಹಳ್ಳಿಗಳಲ್ಲಿ ರೈತರು ಅನುಭವಿಸುತ್ತಿರುವ ಬವಣೆ ತಿಳಿದಿದೆಯೇ? ನಮ್ಮಲ್ಲಿಲ್ಲಿ ದೇಶದ
ತುಂಬಾ ಸಮಸ್ಯೆಗಳಿವೆ, ಸ್ವಾತಂತ್ರ್ಯದದಿನ, ನಟಿಯೊಬ್ಬಳು ಮುಖ್ಯಮಂತ್ರಿಯನ್ನು
ಕೇಳುತ್ತಾಳೆ ’ನೀವೇಕೆ ವೈಟ್ ಸಫಾರಿ ಹಾಕುತ್ತೀರಿ? ನೀವು ಮ್ಯಾನಿಕ್ಯೂರ್ ಪೆಡಿಕ್ಯೂರ್
ಮಾಡಿಸುತ್ತೀರ? ಬ್ಯೂಟಿ ಪಾರ್ಲರಿಗೆ ಹೋಗುತ್ತೀರ?’ ನಗುವುದೋ ಅಳುವುದೋ ನೀವೆ ಹೇಳಿ?!

(ಮುಗಿಸುವ ಮುನ್ನ: ಇದನ್ನೆಲ್ಲ ತಿಳಿದುಕೊಂಡು ಹೀಗೆ ಬರೆಯುತ್ತಿರುವುದರಿಂದ ನನ್ನ
ದೇಶಕ್ಕೆ ಅದರ ಸಮಸ್ಯೆಗಳ ನಿವಾರಣೆಗೆ ನಾನು ಉಪಕಾರ ಮಾಡುತ್ತಿದ್ದೇನೆ ಎಂದು
ನನಗನಿಸುತ್ತಿಲ್ಲ. ನಗರದ ನೌಕರಿಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿರುವ ನಾನು ಹಳ್ಳಿಗೆ
ಹೋಗಿ ಎಂದಾದರು ಮೈ ಬಗ್ಗಿಸಿ ದುಡಿಯಬಲ್ಲೆನೇ? ಬಡಕಲು ದನಗಳಿಗೆ ನೇಗಿಲನ್ನು ಕಟ್ಟಿ
ವ್ಯವಸಾಯ ಮಾಡುತ್ತಿರುವ ರೈತನಿಗೆ ನಗರದಲ್ಲಿ ನಮಗೆ ಸಿಗುವ ಸಾರ್ವಜನಿಕ ಸೌಲಭ್ಯಗಳ ಶೇ
೫ ರಷ್ಟೂ ಸಿಗುತ್ತಿಲ್ಲ. ಓದಿರುವ ನಾವು ಸರ್ಕಾರಿ ನೌಕರಿಗಳಲ್ಲಿನ ಮೀಸಲಾತಿ,
ಕನ್ನಡಪರಚಳವಳಿಗಳಲ್ಲಿ ತುಸು ಹೆಚ್ಚೇ ಎನಿಸುವಷ್ಟು ಹೋರಾಡುತ್ತೀವಾದರೂ, ರೈತನ ಕಷ್ಟಗಳ
ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ? ನಿಜವಾಗಿಯೂ ಅತಿ ಹೆಚ್ಚಿನ ಪ್ರಾಮುಖ್ಯತೆ,
ಸೌಲಭ್ಯಗಳು ಸಿಗಬೇಕಾಗಿರುವುದು ನಮ್ಮ ದೇಶದ ಬೆನ್ನೆಲುಬಾದ ರೈತನಿಗಲ್ಲವೇ?)

– ರಂಜಿತ್ ಅಡಿಗ, ಕುಂದಾಪುರ.

ಒಮ್ಮೆಯಾದರೂ ಈ ಸಂಬಂಧಗಳಾಳಕ್ಕೆ
ಇಣುಕಲೇ ಬೇಕು

ಅದು ಈರುಳ್ಳಿ ಸಿಪ್ಪೆ ಸುಲಿದಂತೆ

ಮೊನ್ನೆಮೊನ್ನೆಯವರೆಗೂ ತನ್ನ
ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀನಿ ಅಂತ
ಒದ್ದೆ ಕಣ್ಣಾಲಿಗಳಿಂದ ಹೇಳಿದ ಗೆಳತಿ
4tmbಕಮ್ಮಿ ಮಾರ್ಕ್ಸು ಬಂದರೆ
ಮನೆಯಿಂದ ಓಡಿಸ್ತೀನಿ ಎಂದು
ಸಿಕ್ಕಾಪಟ್ಟೆ ಬೈದ ಅಪ್ಪ

ಕ್ಯಾಂಪಸ್ಸಿನಲ್ಲಿ ಕೆಲಸ
ಸಿಗಲಿಲ್ಲವೆಂದೊಮ್ಮೆ ಸುಮ್ಮನೆ
ಪರೀಕ್ಷೆ ಮಾಡಲು ಹೇಳಿದ ಕೂಡಲೇ
ಕೆಲಸ ಸಿಗದವನನ್ನು ಮದ್ವೆಯಾಗ್ತೀನಂತ
ಹ್ಯಾಗೆ ತನ್ನಪ್ಪನನ್ನು ಒಪ್ಪಿಸಬೇಕು
ನೀ ನನ್ನ ಮರೆಯಲೇಬೇಕು
ಎಂದು ತನ್ನ ಜೀವವನ್ನೇ ಕಡೆಗಣಿಸಿದಳಾಕೆ

ಮನೆಯನ್ನು ಒತ್ತೆಯಿಡೋಣ
ರಿಟಾಯರ್ಮೆಂಟ್ ಹಣವೂ ಬರಬಹುದು
ಸ್ವಂತ ಬಿಸಿನೆಸ್ಸು ಆರಂಭಿಸು ಮಗನೇ ಅನ್ನುವನು ಅಪ್ಪ

ಎರಡೂ ಮಾತಿಗೂ ಉಕ್ಕಿದ್ದು
ಕಣ್ಣೆದುರಿಗಿನ
ಪರದೆ ಜಾರಿಸೋ ಕಣ್ಣಿರೇ.

ಊಫ್ .. ಈ ಜನಕ್ಕೆ ಯಾವ್ ಟೈಮ್ ನಲ್ಲಿ ಏನ್ ಮಾತಾಡ್ಬೇಕು ಅನ್ನೋದೇ ಗೊತ್ತಾಗಲ್ಲ ….ಇಷ್ಟು ದಿನ ನಾನು ಶಾಂತಿ ಬಗ್ಗೆ ಬರೆದ ಎಲ್ಲ ಲೇಖನಗಳನ್ನು ಅವಳಿಗೆ ತಿಳಿಯದಂತೆ ಸೇಫ್ ಲಾಕರನಲ್ಲಿ ಇಟ್ಟಿದ್ದೆ . ಮೊನ್ನೆ ಶನಿವಾರ ಸಂತೆಗೆ ಇವಳನ್ನು ಕರೆದುಕೊಂಡು ಹೋದಾಗ ಭಾದ್ರಪದ ಮಾಸ ಬರದಿದ್ದರೂ ಸಡನ್ನಾಗಿ ಗಣೇಶ ವಕ್ಕರಿಸಿಕೊಂಡು ಬಿಟ್ಟ . “ಏನ್ ಅತ್ತಿಗೆ ?? ನುಗ್ಗೆಕಾಯಿ ಖರೀದೀನಾ ??? ಎಂದು ಕೇಳಿ ಬಿಡೋದೇ ??. ನನ್ನ ಕಣ್ಸನ್ನೆ ನೋಡ್ತಾನೆ ಇಲ್ಲ ……. ಯಾಕೋ ಗಣೇಶ ಹೀಗೆ ಯಾಕೆ ಕೇಳ್ತಾ ಇದ್ದೀಯಾ ?? ಎಂದು ಇವಳು ಕೇಳಿದಾಗ ಮಗ್ಗಿ ಕಂಠಪಾಠ ಹೊಡೆದಂತೆ ನನ್ನ ಲೇಖನದ ಎಲ್ಲ ಜೋಕುಗಳನ್ನು ಕಕ್ಕಿಬಿಟ್ಟ ….. ಏನ್ ಚೆನ್ನಾಗಿ ಬರೆದಿದ್ದಾರೆ ನಿಮ್ ಮನೆಯವರು ಅಂತ ಹೊಗಳಿಕೆ ಬೇರೆ . ನನಗೆ ನಗುವುದೋ ಅಳುವುದೋ ತಿಳಿಯಲಿಲ್ಲ . ಸಾಯಂಕಾಲ ಮನೆಯಲ್ಲಿ ನನಗೆ ನಡೆದ ಸತ್ಯನಾರಾಯಣ ಪೂಜೆಯ ಬಗ್ಗೆ ಇನ್ಯಾವತ್ತಾದರೂ ಬರೆಯುತ್ತೇನೆ . ಈಗ ಮುನಿಸಿಕೊಂಡ ಶಾಂತಿಯನ್ನು ಒಲಿಸಿಕೊಳ್ಳಲು ಈ ಶಾಂತಿಮಂತ್ರ …..
*************** ಓಂ !!!!! *************
ಮೌನ ಮುರಿದು ಮಾತನಾಡು
ನಗುತ ನನ್ನ ನಲ್ಲೆ
ಮಾತು ಬಿಟ್ಟು ಕೊಲುವೆ ಏಕೆ
ನೀನು ಮೌನದಲ್ಲೇ ??
ಸಿಟ್ಟಲ್ಲಿ ಯಾಕೆ ಮಾಡ್ಕೊಂಡಿದ್ದಿ
ನೀನ್ ಮೂತೀನ್ ಉಬ್ಬಿದ ಪೂರಿ
ನಿನ್ನೆಯಿಂದ್ ಹೇಳ್ತಿದ್ದೀನಿ
I am very sorry !!!!
ಉಹೂ ಇಲ್ಲ … ಆ ಲೈನು ಕೆಲಸ ಮಾಡಲಿಲ್ಲ . ಕಪಾಟಿನ ಬಟ್ಟೆಗಳು ಸೂಟ್ ಕೇಸ ಒಳಗಡೆ ನುಗ್ಗುತ್ತಿವೆ . ಅದರ ಮಧ್ಯೆ ಇವಳು ಕಣ್ಣೀರು ತುಂಬಿಕೊಂಡು ಹೇಳಿದಳು …
ಆಗ್ಲಿ ಏನೂ ನಾಳೆ ನಾನು
ಹೋಗ್ತೀನಿ ಶಿವಮೊಗ್ಗೆ
ಆಮೇಲೆ ನೀನು ತಂದುಕೊಂಡು ತಿನ್ನು
ಸೌತೆ – ಗುಳ್ಳ- ನುಗ್ಗೆ !!
ಇರಲಿ ಬತ್ತಳಿಕೆಯ ಬೇರೆ ಅಸ್ತ್ರ ಪ್ರಯೋಗ ಮಾಡಬೇಕಾಯ್ತು . ಸ್ವಲ್ಪ ಬೆಣ್ಣೆ ಹಚ್ಚಿದರೆ ಒಲಿಯುತ್ತಾಳೋ ನೋಡೋಣ ಅಂದುಕೊಂಡು ಈ ಸೆಂಟಿ ಡೈಲಾಗು ಹೊಡೆದೆ .
ತವರಿಗೆ ಹೋಗ್ತೀನಂತ ಮಾತ್ರ
ಹೇಳ್ಬೇಡ್ವೆ ನನ್  ರಾಣಿ
ನೀನಿಲ್ದೆ ಬದುಕೊದಿಲ್ವೇ
ಈ ನಿನ್ ಗಂಡ ಅನ್ನೋ ಪ್ರಾಣಿ
ಅಬ್ಬಾ … ಪರಿಸ್ಥಿತಿ ಕರ್ಫ್ಯೂನಿಂದ ಸೆಕ್ಷನ್ ೧೪೪ ಗೆ ಇಳಿಯಿತು . ಈಗ ಸೃಷ್ಟಿಯಾಗಿದ್ದ ಉದ್ವಿಗ್ನ ವಾತಾವರಣ ಹತೋಟಿಯಲ್ಲಿ ಬಂತು , ಬಟ್ಟೆಗಳು ಸೂಟ್ ಕೇಸ ನಿಂದ ಕಪಾಟು ಸೇರಿಕೊಂಡವು . ಆದರೆ ಬೆಳಿಗ್ಗೆಯಿಂದ ಒಳಗಡೆ ಜಪ್ತಿಯಾಗಿದ್ದ ಸಿಟ್ಟು ಒಮ್ಮೆಲೇ ಹೊರಬಂದಿತು .
ಊಟಕ್ಕೆ ನಾನು ಬಡ್ಸೋದಿಲ್ಲ
ಅನ್ನದ ಒಂದೂ ಅಗುಳು
ಇಲ್ಲಿವರ್ಗೂ ನನ್ನನ್ ಬೈಕೊಂಡ್
ನೀನ್ ಏನೇನ್ ಬರೆದೆ ಬೊಗಳು
ಇಷ್ಟು ಹೇಳಿ ಮುಖ ತಿರುಗಿಸಿ ಮತ್ತೆ ಮೌನವೃತ ಧಾರಣೆ ಮಾಡಿದಳು ಹೆದರಿಬಿಟ್ಟೆ !!! ಕಣ್ಣಿನಲ್ಲಿ ಜ್ವಾಲಾಮುಖಿ …. ನವರಾತ್ರಿಗೆ 3 ತಿಂಗಳು ಇರಬೇಕಾದ್ರೆನೆ ನನಗೆ ದುರ್ಗೆಯ ದರ್ಶನ. ಇರಲಿ ಇವಳ ಸಿಟ್ಟು ನನಗೆ ಗೊತ್ತಿಲ್ವೆ ??? ನಾನು ಮುಂದುವರಿಸಿದೆ .
ಶಾಂತಿ ಅನ್ನೋ ಹೆಸರಿದ್ರೂ
ನಿನಗ್ಯಾಕೆ ಇಷ್ಟೊಂದು ಕೋಪ ??
ಚಿಕ್ಕ ಪುಟ್ಟ ವಿಷಯಕ್ಕೆ ಯಾಕೆ ತಾಳ್ತಿ
ಮಾಂಕಾಳಿ ಸ್ವರೂಪ ??
ಸ್ವಲ್ಪ ಮುಂಚೆ ಕೂಗ್ತಿದ್ದೆ
ಈಗ್ಯಾಕೆ ಸೈಲೆಂಟ್ ಮೋಡು??
ಇವತ್ತಿಂದ ನಿನಗಾಗಿ ನಾನ್
ಏನೇನ್ ಮಾಡ್ತೀನಿ ನೋಡು
ರನ್ನ ಚಿನ್ನ ಬಂಗಾರಾಂತ
ಪ್ರೀತಿಯಿಂದಲೇ ಕರೀತೀನಿ
“ನನ್ ಹೆಂಡ್ತಿ ನನ್ ಪ್ರಾಣ ” ಅಂತ
ಹೊಸ ಲೇಖನ ಬರೀತೀನಿ
ಉಪ್ಪೇ ಹಾಕದ ಉಪ್ಪಿಟ್
ಕೊಟ್ರು ಚಪ್ಪರಿಸ್ಕೊಂದು ತಿಂತೀನಿ
ಬೆಲ್ಲದ ನೀರಿಗೆ ಪಾಯಸ ಅಂದ್ರೂ
ಸೂಪರ್ ಅಂತ್ಲೇ ಅಂತೀನಿ
ಕಣ್ಣ ಸನ್ನೇಲೆ ಕುಣೀತೀನಿ
ನಾನ್ ನಿನ್ನ ಎಲ್ಲ ತಾಳಕ್ಕೂ
ಕಣ್ಣೀರ್ ಹಾಕದೆ ತಿಂತೀನಿ
ನೀ ಮಾಡಿದ ಪನ್ನೀರ್ ಪಾಲಕ್ಕು
ಮೈಸೂರ್ ಮಲ್ಲಿಗೆ ನಿತ್ಯ ತಂದು
ನಾ ನಿನ್ ತಲೆಗೆ ಮುಡಿಸ್ತೀನಿ
ಎಲ್ಲ ಹಬ್ಬಕ್ಕೂ ರೇಷ್ಮೆ ಸೀರೆ
ತಪ್ಪದೆ ನಾನು ಕೊಡಿಸ್ತೀನಿ
ಸಡನ್ನಾಗಿ ಇವಳಿಗೆ ಗಣೇಶನ ಮಾತುಗಳೆಲ್ಲ ನೆನಪಿಗೆ ಬಂದವೋ ಏನೋ … ಮತ್ತೆ ಶುರು ಹಚ್ಚಿಕೊಂಡಳು
ಡ್ರೈವಿಂಗ್ ಬಗ್ಗೆ ಬರ್ದಿರೋದು
ನಂಗೆ ಚೆನ್ನಾಗಿ ಗೊತ್ತು
ಟ್ರಾಫಿಕ್ ಪೋಲಿಸ್ ಮಗಳನ್ನೇ
ನೀವ್ ಹುಡ್ಕೊಬೇಕಾಗಿತ್ತು .
ಟ್ರಾಫಿಕ್ ಪೋಲಿಸ್ ಮಗಳನ್ನ
ನಾನು ತುಂಬಾ ಪ್ರೀತಿಸ್ತಿದ್ದೆ
ನನ್ ಗ್ರಹಚಾರ ಹಾಳಾಗಿತ್ತು
ನೀನ್ ಬಂದು ನಂಗೆ ಗಂಟು ಬಿದ್ದೆ
ಅನ್ನೋಣ ಎಂದುಕೊಂಡೆ ಆಮೇಲೆ ತಮಾಷೆ ಹೆಚ್ಚಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಕಷ್ಟ ಎಂದುಕೊಂಡು ಈ ಕವನ ಮತ್ತು ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಂಡು ಕೆಳಗಿನ ಸಾಲುಗಳನ್ನು ಹೇಳಿದೆ .
ನನಗೂ ನಿನಗೂ ಸೆಟ್ ಆಗೈತೆ
ಏಳೇಳು ಜನ್ಮದ ನಂಟು
offer expire ಆಗಲಿಕ್ಕೆ
ಇನ್ನೂ ಆರು ಜನ್ಮ ಉಂಟು !!
ಅಬ್ಬ !!! ತುಟಿಯಂಚಿನಲ್ಲಿ ಅಪ್ರಯತ್ನವಾಗಿ ಮುಗುಳ್ನಗು ಮಿಂಚಿ ಮರೆಯಾಯಿತು. ಪುನಃ ಸಿಟ್ಟಿನ ನಾಟಕ ಮಾಡತೊಡಗಿದಳು . ನಮ್ಮ ದೇವರ ಬುದ್ಧಿ ನಮಗೆ ಗೊತ್ತಿಲ್ವೆ ??? ಕಬ್ಬಿಣದಂತೆ ಇವಳ ಮುಖ ಕೂಡ ಕೆಂಪಾಗಿದೆ ಒಂದೆರಡು ಪ್ರೀತಿಯ ಮಾತಿನ ಪೆಟ್ಟು ಸಾಕಾಗುತ್ತದೆ ಎಂಬುದನ್ನು ಮನಗಂಡು ಡೈಲಾಗುಗಳನ್ನು ಮುಂದರಿಸಿದೆ.
ನಗಲು ನೀನು ಮರೆಯುವೆ ನಾನು
ಇರುವ ಎಲ್ಲ ನೋವು
ನಿನ್ನ ನಗುವೇ ನನ್ನ ಎದೆಗೆ
ಝಂಡು ಬಾಮು ಮುವೂ (moov )
ನಾನೂ ನಿಂಗೆ ಪ್ರಾಣ ಅನ್ನೋ
ಸತ್ಯಾನ್ನ ನೀನು ಒಪ್ಪಿಕೊ
ಸಿಟ್ಟನ್ ಬಿಟ್ಟು ಮುತ್ತ ನ್ ಕೊಟ್ಟು
ಒಮ್ಮೆ ನನ್ನನ್ನ ಅಪ್ಪಿಕೋ !!! 🙂
ಇಷ್ಟು ಹೇಳುತ್ತಲೇ ನಾಚಿ ನೀರಾಗಿ ನನ್ನವಳು slow motion ನಲ್ಲಿ ನನ್ನ ಬಳಿ ಬಂದಳು . ರೀ ….. ಏನೇ ಹೇಳಿ ಆರ್ಟಿಕಲ್ಲು ಚೆನ್ನಾಗಿತ್ತು . ನೀವು ಆಚೆ ಹೋದಾಗ ಮನಸ್ಸು ತುಂಬಿ ನಕ್ಕುಬಿಟ್ಟೆ ಅಂದಾಗ ನನ್ನ ಲೇಖನಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಯಿತು . ಹೀಗೆ ನನ್ನ ಸಮಸ್ಯೆ ದೂರವಾಯಿತು . ಒಂದು ನಿಮಿಷ ತಡೀರಿ ಈ ಗಣೇಶನ ಕುಶಲೋಪಚಾರ ಮಾಡಿ ಬರುತ್ತೇನೆ
*************** ಓಂ ಶಾಂತಿ ಶಾಂತಿ ಶಾಂತಿಃ********************
****************************ವಿಕಟಕವಿ*********************
– ಸುಮಂತ ಶ್ಯಾನುಭೋಗ್, ಮುಂಬೈ.

ನಾನು ನನ್ನ ಸಂಸಾರ
———————–
ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall
ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು
ಕನಸಿನಲ್ಲೂ ಯೋಚಿಸಿರಲಿಲ್ಲ . “ರೀ … ಇವತ್ತು ಉಪ್ಪಿಟ್ಟು ಮಾಡುತ್ತೇನೆ … ಅಡುಗೆ
ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ
Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . “ಏನೋ ….. ಬೆಳಿಗ್ಗೆ
ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು … ಹೌದು
ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ
ನನ್ನವಳ “ಹಸ್ತಗುಣದ” ಬಲಿಪಶುವಾಗಿದ್ದ ರಮೇಶಣ್ಣ … ಲೋ Insurance Premium
ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ
ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ .
ಒಹ್ ….. ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಶಾಂತಿ .
ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ
ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ
“ಪಾರ್ವತಿಯ ” ತರಹ ಇವಳು ಕೂಡ “ಮುದ್ದಿನ ಮನೆಮಗಳು “. ” ಆರತಿ ತೆಗೊಂಡರೆ ಗರ್ಮಿ
ತೀರ್ಥ ತೆಗೊಂಡರೆ ಶೀತ ” ಅಂತಾರಲ್ಲ ಅದೇ ಪಂಗಡಕ್ಕೆ ಸೇರಿದವಳು .ಕಬ್ಬು ತಿಂದರೆ
ಹಲ್ಲಿಗೆ ನೋವಾಗುತ್ತದೆಂದು Dry Fruits ತಿಂದೇ ಬೆಳೆದವಳು. ಕಲಿತಿದ್ದು
ಇಂಜಿನಿಯರಿಂಗ್ ಆದರೂ ಗಂಜಿ ನೀರು ಬೇಯಿಸಲಿಕ್ಕು ಬರುವುದಿಲ್ಲ . ಇವಳ ತಪ್ಪಿಲ್ಲ ಬಿಡಿ
. ಇವಳು ಅಡುಗೆ ಮನೆ ಕಡೆ ಬಂದರೂ “ನೀನು ಓದ್ಕೋ ಪುಟ್ಟಿ ” ಎಂದು ಹೇಳಿ ಹೊರಗೆ
ಕಳಿಸಿದರೆ ಏನು ಮಾಡುವುದು ?? ಈ ಪುಟ್ಟಿ ಹೆಸರಿನ ಹಸ್ತಾಂತರ ಇಂದಿಗೂ ಆಗಿಲ್ಲ . ಈಗ
ನಾವು ನಮ್ಮ ಮಗಳನ್ನು ಇವಳ ತವರು ಮನೆಗೆ ಕರೆದುಕೊಂಡು ಹೋದರೆ ಅವಳನ್ನು “ಪುಟ್ಟಿ ಮಗಳು
” ಎಂದು ಕರೆಯುತ್ತಾರೆ . ನೋಡುವವರಿಗೆ ನಾನೇನು ಇವಳನ್ನು ಬಾಲ್ಯವಿವಾಹ
ಮಾಡಿಕೊಂಡಿರುವಂತೆ ಅನಿಸುತ್ತದೆ .
ಹೌದ್ರಿ … ನಮ್ಮ ಮನೆಯಲ್ಲಿ ನಾನೇ ಅಡಿಗೆ ಮಾಡೋದು .. ಅರೆ !!! ಅದರಲ್ಲೇನು ನಾಚಿಕೆ
?? ನೀವು ರಾಮಾಯಣ ಮಹಾಭಾರತ ಓದಿದ್ದೀರ ತಾನೇ ?? ಅದರಲ್ಲಿ ನಳಪಾಕ , ಭೀಮಪಾಕದ ಉಲ್ಲೇಖ
ಬಿಟ್ಟರೆ “ದಮಯಂತಿ ಪಾಕ ” “ದ್ರೌಪದಿ ಪಾಕ” ದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ??
ಮತ್ತೆ ಅಜ್ಞಾತ ವಾಸದ ಕಾಲದಲ್ಲಿ ದ್ರೌಪದಿಯನ್ನು ಅಡುಗೆ ಕೆಲಸಕ್ಕೆ ಕಳಿಸಲು ತಯಾರಿ
ಮಾಡಿದ್ದರು ಆದರೆ ಅವಳು “ಏನ್ರಿ … ನಾನು ದುರ್ಯೋಧನ ಸಾಯೋವರ್ಗೂ Comb
ಮಾಡ್ಕೊಳ್ಳೋಲ್ಲ ಅಂತ ಶಪಥ ಮಾಡಿದ್ದೀನಿ ಆಮೇಲೆ ಸಾಂಬಾರಿನಲ್ಲಿ ಕೂದಲು ಬಂದ್ರೆ ಕಷ್ಟ
.. ನೀವೇ ಹೋಗಿ ಬನ್ರಿ .. ಎಂದು ಭೀಮನನ್ನು ಏಮಾರಿಸಿದಳು . ಆದರೆ ನನ್ನವಳು ಹಾಗಲ್ಲ
ನಾನೇ ಮಾಡುತ್ತೇನೆ ಎಂದು ಮುಂದೆ ಬಂದರೂ ನಾನು ಬಿಡುವುದಿಲ್ಲ . ನಮ್ಮ ಅಡುಗೆ ಕೋಣೆಯ
ಹೊಸ್ತಿಲಿನಲ್ಲಿ ಎರಡು ಲಕ್ಷ್ಮಣ ರೇಖೆ ಎಳೆದಿದ್ದೇನೆ ಒಂದು ಜಿರಳೆಗೆ ಮತ್ತೊಂದು ನನ್ನ
ಹೆಂಡತಿಗೆ .
ಮದುವೆಯಾದ ಹೊಸತರಲ್ಲಿ ಪರಸ್ಪರ impress ಮಾಡುವ ಕಾರ್ಯ ಭರದಿಂದ ನಡೆಯುವುದು ಸಾಮಾನ್ಯ
. ನಾನೂ ಹಾಗೇನೇ. ಆಗ ನಮ್ಮ ಮದುವೆಯಾಗಿ 2 ವಾರವಷ್ಟೇ ಕಳೆದಿತ್ತು . ಅಡುಗೆಯಲ್ಲಿ ಇವಳ
ಪರಾಕ್ರಮ ಅರಿತಿರಲಿಲ್ಲ . ಆಫೀಸಿಗೆ ಹೋಗುವ ಅವಸರದಲ್ಲಿದ್ದೆ . ರೀ breakfast
ಮಾಡ್ಕೊಂಡು ಹೋಗಿ ಅಂದಳು . ಸರಿ ಎಂದು ತಿಂದು impress ಮಾಡುವ ನಿಟ್ಟಿನಲ್ಲಿ “ಕಾಫಿ
ಚೆನ್ನಾಗಿದೆ ” ಎಂದೆನು . ” ನಾನು ಟೀ ಮಾಡಿದ್ದು” ಎಂದು ಹೇಳಿ ಮುಖ ಸಣ್ಣದು
ಮಾಡಿಕೊಂಡು ಒಳಗೆ ಹೋದಳು . ” ಸ್ವಲ್ಪ ಸಾವರಿಸಿಕೊಂಡು “ಹಹ್ಹಹ್ಹ … ತಮಾಷೆ
ಹೇಗಿತ್ತು ??? ಎಂದು ಕೇಳಿ ಮಾತಿನ ಓಘ ಬದಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ .
ಆಫೀಸಿನಿಂದ ಫೋನ್ ಮಾಡಿ ಹೀಗೆ ಮಾತಾಡುತ್ತಾ ” ನಾಳೆ ಏನು ಸ್ಪೆಷಲ್ ?? ಎಂದು ಕೇಳಿದೆ
. “ನೀವೇ ಹೇಳ್ರಿ ” ಎಂದಳು . ಇಡ್ಲಿ ಮಾಡು … ಬೇಳೆ ಸ್ವಲ್ಪ ಹೆಚ್ಚೇ ನೆನೆಸು ನಾಳೆ
ನನ್ನ ನಾಲ್ಕು ಗೆಳೆಯರು ಮನೆಗೆ ಬರುತ್ತಾರೆ ಎಂದೆನು . ಸಂಜೆ ಮನೆಗೆ ಹೋದವನಿಗೆ ತಲೆ
ತಿರುಗುವುದೊಂದು ಬಾಕಿ ನನ್ನ ಅರ್ಧಾಂಗಿ ಅರ್ಧ ಚೀಲ ತೊಗರಿಬೇಳೆ ನೆನೆಸಿ ಇಟ್ಟಿದ್ದಾಳೆ
. ನನ್ನ ನೋಡಿ “ರೀ … ಸಾಕಾ ಇಷ್ಟು ?? ಎಂದಳು . ಸಾಕಮ್ಮ ಸಾಕು ….. ನಮ್ಮ ಮದುವೆ
ದಿನ ಕೂಡ ಇಷ್ಟು ಬೇಳೆ ನೆನೆಸಿಟ್ಟಿರಲಿಕ್ಕಿಲ್ಲ ಎಂದೆನು .ಅತ್ತೆ ಮಾವ ಬರುವ ನೆಪ
ಮಾಡಿ ಗೆಳೆಯರ ಕಾರ್ಯಕ್ರಮವನ್ನು ಮುಂದೆ ಹಾಕಿದೆನು . ಆಮೇಲೆ ಒಂದು ವಾರ ಬೆಳಿಗ್ಗೆ
ತಿಂಡಿಗೆ “ದಾಲ್ ಖಿಚಡಿ ” ಊಟಕ್ಕೆ ಬೇಳೆಸಾರು .ಹೀಗೆ ದಾಲಿನ ಧಾಳಿಯಿಂದ ಹತ್ತು ದಿನ
ಹೊಟ್ಟೆಯಲ್ಲಿ ……. ಬೇಡ ಬಿಡಿ… ಅದನ್ನೆಲ್ಲಾ ಯಾಕೆ ಬರೆಯುವುದು …..ನಿಮಗೆ
ಅರ್ಥವಾಯಿತಲ್ಲ ಅಷ್ಟೆ ಸಾಕು .
ರಮೇಶಣ್ಣನ ಪ್ರಸಂಗ :- ರಮೇಶಣ್ಣ ನನ್ನ ಚಡ್ಡಿ ದೋಸ್ತಿ . ಸಂಬಂಧಿ ಕೂಡ ಸ್ನೇಹಿತ ಕೂಡ
. ನನಗಿಂತ 2 ವರ್ಷ ದೊಡ್ಡವನಾಗಿದ್ದರೂ ಸಣ್ಣ ಪ್ರಾಯದಿಂದ ನನ್ನ ಒಡನಾಡಿ . ಮದುವೆ ಆದ
ನಂತರ ಒಂದು ದಿನ ಅವನನ್ನು ಊಟಕ್ಕೆ ಕರೆದೆ . ಅವನಿಗೆ ನುಗ್ಗೆ ಕಾಯಿ ತುಂಬಾ ಇಷ್ಟ .
ಅದಕ್ಕೆ ನನ್ನಾಕೆಗೆ ನುಗ್ಗೆಕಾಯಿ ಹಾಕಿ ಸಾಂಬಾರು ಮಾಡಲು ಹೇಳಿದೆ . ಅವಳು ಮಾಡಿದಳು
.ರಮೇಶಣ್ಣ ತಿಂದವನೇ ..” ನುಗ್ಗೆಕಾಯಿಯನ್ನು ಯಾವ ಕಟ್ಟಿಗೆ ಡಿಪೋದಿಂದ ತಂದೆ ?? ಎಂದು
ಕೇಳಿದ . ಎಲ್ಲ ಬಲಿತಿರುವ ನುಗ್ಗೆಕಾಯಿಗಳು . ಇವಳನ್ನು ಕೇಳಿದರೆ “ರೀ ಮಾರ್ಕೆಟಿಗೆ
ಹೋಗಿದ್ದೆ ಆ ತರಕಾರಿ ಅಂಗಡಿಯವನು ಸಣ್ಣ ನುಗ್ಗೆಕಾಯಿ ಕೊಡಲು ಬಂದ ದಬಾಯಿಸಿ ದೊಡ್ಡ
ದೊಡ್ಡ ನುಗ್ಗೆ ಕಾಯಿ ಹಾಕಿಸಿಕೊಂಡು ಬಂದೆ ” ಅಂದಳು . ಅವಳ ಮುಖದ ಮೇಲೆ ದಿಗ್ವಿಜಯ
ಸಾಧಿಸಿದ ಸೇನಾಧಿಕಾರಿಯ ಸಂಭ್ರಮ . ನನಗೋ ಅಪ್ಪ ಹೇಳಿದ “ದೊಡ್ಡ ಪಾವಣೆ” ಕತೆ
ನೆನಪಾಯಿತು .ಇಷ್ಟ ಮಾತ್ರವಲ್ಲ …
ಚಪಾತಿ – ಉಂಡೆ -ಒಬ್ಬಟ್ಟಿನೊಟ್ಟಿಗೆ
ಬೇಕೇ ಬೇಕು ಚಾಕು ಕತ್ತರಿ ಸುತ್ತಿಗೆ ||
ಪೂರಿಯಲಿ ಅಡಗಿಹುದು ಎಣ್ಣೆಯಾ ಗಿರಣಿ
ಅಡುಗೆ ಮಾಡಿದರೆ ಇವಳು ಮಕ್ಕಳದು ಧರಣಿ.||
ಮಾಡಿದರೆ ಗೋಬಿ ಮಂಚೂರಿ
ಅಗ್ನಿಶಾಮಕ ದಳ ಪಕ್ಕದಲ್ಲಿದ್ದರೆ ಸರಿ
ಪನ್ನೀರು ತಿಂದರೆ ಕಣ್ಣೀರು
ಹೇಗೆ ?? ನನ್ನವಳ ದರ್ಬಾರು ??
ಸಾರಿನಲ್ಲಿ ಉಪ್ಪಿಲ್ಲ ಪಾಯಸದಿ ಬೆಲ್ಲ
ಬೇಳೆ ಸಾರಿನಲ್ಲಿ ಬೇಳೆ ಬೆಂದಿರುವುದಿಲ್ಲ||
ಪಲ್ಯದಲಿ ಅಡಗಿಹುದು ನೂರೆಂಟು ಸೊತ್ತು
ನನ್ನವಳ ಅಡುಗೆ ನನಗೆ ನುಂಗಲಾಗದ ತುತ್ತು ||
ಅಡುಗೆ ಮನೆಯಲ್ಲಿ ಮಾತ್ರ ಇವಳ ಕಾರ್ಯವ್ಯಾಪ್ತಿ ಮುಗಿಯೊಲ್ಲ . ಇವಳು ಮನೆಯಲ್ಲಿದ್ದರೆ
ಅಥವಾ ಪಾದಚಾರಿಯಾಗಿ ಹೊರಗೆ ಬಂದರೆ ಇಡೀ ಊರಿಗೆ ಶಾಂತಿ . ಆದರೆ ಅಪ್ಪಿ – ತಪ್ಪಿ ವಾಹನ
ಏರಿದರೆ ಈಕೆ ಪ್ರಳಯಾಂತಕಿ. ಊರಿನಲ್ಲಿ ಕರ್ಫ್ಯೂ ಜಾರಿ . ಹೆಸರೇನೋ ಸುಶಾಂತಿ .
ಇದನ್ನು “ಶಾಂತಿ ಅಶಾಂತಿಗಳ ಇರುವಿಕೆ ಯಾರ ಮೇಲೆ ಅವಲಂಬಿತವಾಗಿದೆಯೋ ಅವಳು”(ವಾಹನ
ಸಂಚಾರ ಸಮಾಸ ) ಎಂದು ಅರ್ಥೈಸಬಹುದು. ಊರಿನಲ್ಲಿನ ಎಲ್ಲ ಘಟಾನುಘಟಿಗಳು “ಜೀವ ಇದ್ರೆ
ಬೆಲ್ಲ ಬೇಡಿ ತಿಂಬೆ” ಎನ್ನುತ್ತಾ ಮನೆಯಲ್ಲಿ ಕೂರುವುದು ಸತ್ಯ .
ನೀವು ಉಡುಪಿಯಿಂದ ಭಟ್ಕಳಕ್ಕೆ ಹೋಗುತ್ತಿದ್ದೀರಾ ?? ಏನು ?? via ಕುಂದಾಪುರಾನಾ ???
ಬೇಡ …. ಈಗಲೇ ಎಚ್ಚರಿಸುತ್ತಿದ್ದೇನೆ . ನೋಡಿ ಸರ್ .. ಹಣ ಹೋದರೆ ನಾಳೆ
ಸಂಪಾದಿಸಬಹುದು .ಕೊಳಲಗಿರಿ -ಪೆರ್ಡೂರು-ಹೆಬ್ರಿ -ಶಿವಮೊಗ್ಗ -ಸಿದ್ದಾಪುರ -ಕೊಲ್ಲೂರು
– ಬೈಂದೂರು ಮಾರ್ಗದಿಂದ ಭಟ್ಕಳಕ್ಕೆ ಬನ್ನಿ . ಯಾಕೆ ಎಂದು ಕೇಳುತ್ತಿದ್ದೀರಾ ?? “
ಸುಶಾಂತಿ ಇದ್ದಾಳೆ ಎಚ್ಚರಿಕೆ ” ಏನು ?? ನಮ್ಮ ಬಳಿ license ಇದೆ ನಾವು ಹೀಗೆ
ಹೋಗುತ್ತೇವೆ ಅನ್ನುತ್ತೀರಾ ?? ಅವಳ ಬಳಿ ಇಲ್ಲಾ ಸ್ವಾಮೀ …
ಏನಿಲ್ಲ ಮೊನ್ನೆ ಇವಳು ದ್ವಿಚಕ್ರ ವಾಹನ ಕಲಿಯುವ ಹುಮ್ಮಸ್ಸಿನಲ್ಲಿ ನನ್ನ Honda
Activa ಏರಿದಳು ನೋಡಿ . ಇವಳು ಮೊದಲೇ ಎಲೆಕ್ಟ್ರಿಕಲ್ ಇಂಜಿನಿಯರ್ . ಅದೂ 85 %
ಅಂಕಗಳೊಂದಿಗೆ . ಕಲಿತ ವಿದ್ಯೆಯನ್ನೆಲ್ಲ ವಾಹನದ ಮೇಲೆ ಪ್ರಯೋಗ ಮಾಡಿದರೆ ಹೇಗೆ ನೋಡಿ
??ವಾಹನ ಹತ್ತಿದ ತಕ್ಷಣ ” When a tow wheeler is started and you twist the
acceleratore the fingers which encircle the accelarator will give the
direction of motion” ಎಂಬ ” THUMB RULE ” apply ಮಾಡಿಯೇ ಬಿಟ್ಟಳು . ಅಂದರೆ
ವಾಹನ ನಿಲ್ಲಿಸಲು accelarator ನ್ನು ಹಿಂದೆ ತಿರುಗಿಸಲು ಶುರು ಮಾಡಿದಳು . ಆ
ದ್ವಿಚಕ್ರ ವಾಹನಕ್ಕೆ ಈ ನಿಯಮ ಗೊತ್ತಿಲ್ಲದಿದ್ದರೆ ಅದು ಇವಳ ತಪ್ಪೇ ??
ದಿಕ್ಕಾಪಾಲಾಗಿ ಓಡಲು ಶುರು ಮಾಡಿತು . ಪುಣ್ಯಕ್ಕೆ ಮೈದಾನದಲ್ಲಿ ಬಿಡುತ್ತಿದ್ದಳು .
ಇಲ್ಲದಿದ್ದರೆ ಆ ದಿನ ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳು ” HOUSE-FULL ” ಬೋರ್ಡ್
ಹಾಕುತ್ತಿದ್ದವೋ ಏನೋ . !!!!!!!!!! ದೂರದಿಂದಲೇ ಇದನ್ನು ನೋಡಿದ ಊರ ಜನರು
ಮರುದಿನದಿಂದ ಇವಳು ಮನೆಯಿಂದ ಹೊರನಡೆದರೆ ನಡೆದುಕೊಂಡು ಹೋಗುತ್ತಿದ್ದಾಳೋ ಅಥವಾ
ವಾಹನದಲ್ಲೋ ಎಂದು ಮನೆಯ ಕಿಟಕಿಯಿಂದಲೇ confirm ಮಾಡಿಕೊಂಡು ಆಮೇಲೆ ಮನೆಯಿಂದ
ಹೊರಬೀಳುತ್ತಿದ್ದರು .
ಇನ್ನು ಇವಳು ಕಾರು ಕಲಿಯ ಹೊರಟಳು . ಆ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ನೋಡಿ ಮೇಡಂ
10 km speed –1st gear
20km speed –second gear
30 km speed — 3rd grear —– ಹೀಗೆ ಸರಳ ಲೆಕ್ಕಾಚಾರ ಹೇಳಿದ . ಅದೇ ಅವನು
ಮಾಡಿದ ತಪ್ಪು . ರಸ್ತೆ ನೋಡುವುದು ಬಿಟ್ಟು ಓಡೋ ಮೀಟರ್ ನೋಡುತ್ತಾ ಕುಳಿತಳು . ಮತ್ತೆ
ಇವಳು ಗಾಡಿ ಬಿಡುವಾಗ ಕಡಿಮೆ ಎಂದರೂ ಒಂದು ಮೂವರು assistants ಬೇಕು .
1) Pen – Paper ಹಿಡಿದುಕೊಂಡು ಗಾಡಿ ಯಾವ gear ನಲ್ಲಿದೆ ಮತ್ತು ಗಾಡಿಯ speed
ಎಷ್ಟು ಎಂದು ಲೆಕ್ಕ ಹಾಕಿ chaart Prepare ಮಾಡಿ ಹಿಂದಿನಿಂದ ಹೇಳಲು ಒಬ್ಬ .
2)ಅವನ ಮಾತು ಕೇಳಿ ಈಕೆ gear change ಮಾಡುತ್ತಾಳಲ್ಲ ಆಗ ಸ್ಟೇರಿಂಗ್ ಹಿಡಿದುಕೊಳ್ಳಲು ಒಬ್ಬ .
3) ಗಾಡಿಯ ಮುಂದೆ ಚಲಿಸುತ್ತ ರೋಡ್ ಹಂಪ್, ಟರ್ನ್ ಪಾಯಿಂಟ್ ಎಲ್ಲಿ ಬರುತ್ತದೆ ಮುಂತಾದ
ವಿಷಯಗಳ ಲೇಟೆಸ್ಟ್ update ಕೊಡಲು ಇನ್ನೊಬ್ಬ .
ಮತ್ತೆ ಬಲಕ್ಕೆ ತಿರುಗುವಾಗ ಎಡಗಡೆಯ indicator ಹಾಕುವುದು horn ಎಂದು ವೈಪರ್ ಶುರು
ಮಾಡುವುದು ಇದೆಲ್ಲ ಕಾಮನ್ ಬಿಡಿ . ಮುಂದೆ RTO ದವರು license ಕೊಡುವ ಮೊದಲು
ಕುಂದಾಪುರದಲ್ಲಿ 2 ತಿಂಗಳು ಡ್ರೈವ್ ಮಾಡಿ ಬಂದಿರಬೇಕೆಂಬ ಕಂಡೀಷನ್ ಹಾಕಬಹುದು.
ಹೀಗೆ ಮನೆ-ಆಫೀಸು -ಅಡುಗೆ ಎಂದು ಸುಸ್ತಾಗುತ್ತೇನೆ . ಬಳಲಿ ಬೆಂಡಾಗಿ ಮನೆಗೆ ಮರಳಿದಾಗ
ಮನೆ ಬಾಗಿಲಿನಲ್ಲಿ ಗೋಣು ಉದ್ದ ಮಾಡಿಕೊಂಡ ನನ್ನವಳು ” ರೀ ನಿಮಗೋಸ್ಕರ ಕಾಯ್ತಾ
ಇದ್ದೆ… ಬೇಗ ಟೀ ಮಾಡ್ರಿ….. ಎಂದು ತುಟಿಯಂಚಿನಲ್ಲಿ ನಕ್ಕಾಗ ಆ ನಗುವಿನಲ್ಲಿ
ಸುಸ್ತೆಲ್ಲಾ ಮರೆತು ಹೋಗುತ್ತದೆ . ಏನೇ ಹೇಳಿ “ನನ್ನವಳು ನನ್ನೆದೆಯ ಹೊನ್ನಾಡನಾಳುವಳು
” . ಇದೇ ನಾನು ಮತ್ತು ನನ್ನ ಸಂಸಾರದ ಕತೆ———————-
– ಸುಮಂತ ಶ್ಯಾನುಭೋಗ್, ಮುಂಬೈ

” . ಇದೇ ನಾನು ಮತ್ತು ನನ್ನ ಸಂಸಾರದ ಕತೆ

-ರಂಜಿತ್ ಅಡಿಗ , ಕುಂದಾಪುರ.

ಮೂರು ಕಾಸಿತ್ತು ಕೊಂಡ ವಸ್ತು
ಎಲ್ಲೆಂದರೆ ಅಲ್ಲೇ ಬಿದ್ದುಕೊಂಡಿತ್ತು
ಎರಡು ಹನಿ ಉಸಿರು ತುಂಬಿದರೆ
ತನ್ನೊಳಗನು ಅರಿಯಿತು, ಎಚ್ಚೆತ್ತಿತು ಆತ್ಮ

Baloon-7-28-03

ಉಸಿರಿಗೆಲ್ಲ ಬೆಲೆಯಿಲ್ಲ ಎಂದು ನೊಂದು
ಸಾಯಿಸಿಕೊಳ್ಳುವವರನು ನಾಚಿಸುತ್ತ
ಸ್ವತಃ ಬೆಲೆಯ ಮಟ್ಟವನು ಸೂಚಿಸುತ್ತ
ಎತ್ತರೆತ್ತರ ಏರುತಿತ್ತು,ಆಗಸವನೇ ತಲುಪುವತ್ತ

ಯಮನ ಜೋಳಿಗೆಯಂತೆ ಗರ್ಭದೊಳು
ಮುದುಡಿದ ಮಗುವಿನಂತೆ
ತೇಲುತ್ತ ಹಾರುತ್ತ ಆಗುತ್ತ ಚುಕ್ಕಿ

ಸುತ್ತಲಿನ ಜನರೆಲ್ಲ ನೋಡಿ
ಉಸಿರು ಹೋಯಿತು, ಉಸಿರು ಹೋಯಿತು
ಎಂದೆಸೆದರು ಉದ್ಗಾರವನು!

****

– ರೇಶ್ಮಾ ನಾರಾಯಣ, ಉಡುಪಿ

ಅವನು ನಮ್ಮ ಪುಟ್ಟ ಜಗತ್ತಿಗೆ ಅದ್ಭುತ ಹೀರೋ ಆಗಿದ್ದ

ನಾನು ಪ್ರೈಮರಿಯಲ್ಲಿದಾಗ ಟಿ.ವಿ ಯಲ್ಲಿ ಶಕ್ತಿಮಾನ್ ಅಂತ ಒಂದು ಧಾರಾವಾಹಿ ಬರ್ತಿತ್ತು. ನನ್ನ ಥರಾನೇ ಎಲ್ಲ ಮಕ್ಕಳೂ ಇಷ್ಟ ಪಡ್ತಿದ್ದ ಧಾರಾವಾಹಿ ಅದು. ಪ್ರತಿ ಆದಿತ್ಯವಾರ ಮಧ್ಯಾನ್ ೧೨ ಗಂಟೆಗೆ ಬರ್ತಿದ್ದ ಧಾರಾವಾಹಿ ನೋಡ್ಕೊಂಡು ಹೋಗಿ, ಸೋಮವಾರ ಬೆಳಿಗ್ಗೆ study periodನಲ್ಲಿ ಫ್ರೆಂಡ್ಸ್ ಜೊತೆ ಅದರ ಬಗ್ಗೆ ಪಾಠಕ್ಕಿಂತ ಸೀರಿಯಸ್ ಆಗಿ ಚರ್ಚೆ ಮಾಡ್ತಿದ್ವಿ. ಆಕಸ್ಮಾತ್ ಧಾರಾವಾಹಿ ಬರೋ ಟೈಮಲ್ಲಿ ಕರೆಂಟ್ ಇಲ್ಲದಿದ್ರೆ ಮಾತ್ರ ಕೆ. ಇ ಬಿ ಯವರಿಗೆ ಮನಸಾರೆ ಶಾಪ ಹಾಕುತ್ತಿದ್ವಿ. ಕರೆಂಟ್ ಇದ್ದ ಒಂದು ದಿನಾನೂ ’ಶಕ್ತಿಮಾನ್’ ನ ಮಿಸ್ ಮಾಡ್ಕೊಂಡಿರಲಿಲ್ಲ. ಶನಿವಾರನೇ ಹೋಂವರ್ಕ್ ಮುಗಿಸಿ ಕುಳಿತಿರುತ್ತಿದ್ವಿ.

ಆ ಒಂದು ಗಂಟೆಯ ಅವಧಿ ನಮ್ಮ ಪಾಲಿಗೆ ಅತೀ ಪ್ರಿಯವಾಗಿರ್ತಿತ್ತು. ಆ ಟೈಂ ನಲ್ಲಿ ಊಟಕ್ಕೆ untitled ಕರೆದರೂ ನಾವು ಕೇಳಿಸದಂತೆ ಕೂತಿರ್ತಿದ್ವಿ. ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ ಹಾಕಿಕೊಳ್ತಿದ್ದ ಆ ಕೆಂಪು ಜಾಕೆಟ್, ಅದರ ನಡುವಿನ ಗೋಲ್ಡ್ ಕಲರ್ ಸ್ಟಾರ್ ಎಲ್ಲಾ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಶಕ್ತಿಮಾನ್ ಟ್ಯಾಟ್ಟೂ ಗಳನ್ನಂತೂ ರಾಶಿ ರಾಶಿ ಒಟ್ಟು ಮಾಡಿ ಪುಸ್ತಕ, ಕಂಪಾಸ್ ನ ಮೇಲೆಲ್ಲಾ ಅಂಟಿಸುತ್ತಿದ್ವಿ. ದ್ವಿಜ್ ಎಂಬ ಬಾಲಕನ ಕೈಯಲ್ಲಿನ ಆ ಟೈಮ್ ಮಶೀನ್ ಕನಸಲ್ಲೂ ನಮ್ಮನ್ನು ಕಾಡುತ್ತಿತ್ತು. ಅವನು ಅಲ್ಲಿ ರಾಕ್ಷಸರ ಜೊತೆ ಹೋರಾಡುತ್ತಿದ್ದರೆ ನಾವು ಇಲ್ಲಿ ಕುಳಿತು ನಾವೇ ಹೊಡೆದಾಡ್ತಿದ್ದೀವಿ ಅನ್ನೋ ಥರ ಆಡ್ತಿದ್ವಿ.

ಶಕ್ತಿಮಾನ್ ನ ’ಪಂಡಿತ್ ಗಂಗಾಧರ್ ವಿದ್ಯಾಧರ್ ಮಾಯಾಧರ್ ಓಂಕಾರನಾಥ್ ಶಾಸ್ತ್ರಿ’ ಅನ್ನೋ ಡೈಲಾಗ್ ಅಂತೂ ಫೇವರೀಟ್ ಆಗಿತ್ತು. ಅದರಲ್ಲಿನ ಗಿಲ್ ವಿಶ್ ಅನ್ನೋ ರಾಕ್ಷಸ ಕೈ ಬೆರಳುಗಳನ್ನು ತಿರುಗಿಸೋ ರೀತಿ ಭಯಾನಕವಾಗಿರ್ತಿತ್ತು. ಮಾತಾಡಿದ್ದಕ್ಕೆ  ಹೆಸರು ಬರೆದು ಟೀಚರ್ ಗೆ ಕೊಟ್ಟ ನಮ್ಮ ಕ್ಲಾಸ್ ನ ಒಬ್ಬ ಹುಡುಗನಿಗೆ ’ಗಿಲ್ ವಿಶ್’ ಅಂತ ಹೆಸರಿಟ್ಟು ಬೇಕಾದಷ್ಟು ಬೈದು ಸಿಟ್ಟು ತೀರಿಸ್ಕೋತಿದ್ವಿ. ರಜೆಯಲ್ಲಿ ಶಕ್ತಿಮಾನ್ ಆಟ ಆಡೋವಾಗ ’ನಾನಾಗ್ತೀನಿ.. ತಾನಾಗ್ತೀನಿ’ ಅಂತ ಗಲಾಟೆ ಮಾಡಿ ಕೊನೆಗೆ ಆಟ ಜಗಳದಲ್ಲಿ ಮುಗಿದಿರ್ತಿತ್ತು. ಅದರ ಕ್ರೇಜ್ ಎಷ್ಟಿತ್ತು ಅಂದರೆ ಅದು ಮುಗಿದಾಗ, ’ಪುನಃ ಮೊದಲಿನಿಂದನಾದ್ರೂ ತೋರಿಸ್ಬೇಕಿತ್ತು’ ಅಂದುಕೊಂಡಿದ್ವಿ. ಶಕ್ತಿಮಾನ್ ಥರಾನೇ ಮಹಡಿ ಮೇಲಿಂದ ಹಾರೋಕೆ ಹೋಗಿ ಒಬ್ಬ ಹುಡುಗ ಬಿದ್ದು ಪ್ರಾಣ ಕಳೆದುಕೊಂಡ ಅಂತ ಗೊತ್ತಾದಾಗ ತುಂಬಾ ಬೇಜಾರಾಗಿತ್ತು. ಶಕ್ತಿಮಾನ್ ನ  ಹಾಗೇ ನಂಗೂ ಅದ್ಭುತವಾದ ಶಕ್ತಿ ಕೊಡು ಅಂತ ದೇವರಿಗೆ ಹಾಕಿದ ಅರ್ಜಿಗೆ ಅವನ ಕಡೆಯಿಂದ ಇನ್ನೂ ಉತ್ತರ ಬಂದಿಲ್ಲ.

– ಸುಪ್ರೀತ್ ಕೆ. ಎಸ್, ಬೆಂಗಳೂರು.

ಪ್ರತಿನಿತ್ಯ ತಪ್ಪದೆ ಬ್ಲಾಗಿಗೆ ಬರೆಯಬೇಕು ಅಂದುಕೊಂಡಿದ್ದೆ. ಅದನ್ನೊಂದು ಸಾಧನೆ ಎನ್ನುವ ಹಾಗೆ ಭಾವಿಸಿದ್ದೆ. ಏಕೆ ದಿನನಿತ್ಯ ಬರೆಯಬೇಕು ಎಂದು ಕೇಳಿಕೊಳ್ಳುವ ತಾಳ್ಮೆ ಇರುತ್ತಿರಲಿಲ್ಲ. ಏನೋ ಉನ್ಮಾದ. ಬರೀ ಬೇಕು ಅನ್ನಿಸಿದ ತಕ್ಷಣ ಬರೆಯಲು ಶುರುಮಾಡಿಬಿಡಬೇಕು. ಏನಾದರೂ ಮಾಡಬೇಕೆಂಬ ಹುಮ್ಮಸ್ಸು ಹುಟ್ಟಿದಾಗ ದೊಡ್ಡವರು ಅದರ ಇಹಪರಗಳ ಬಗ್ಗೆ ಯೋಚಿಸಿ ಮಾಡು ಎಂದಾಗ ಹುಟ್ಟುವ ರೇಜಿಗೆಯನ್ನೇ ನಮ್ಮನ್ನು ನಾವು ನಿಧಾನಿಸಲು ಪ್ರಯತ್ನಿಸಿದಾಗ ಎದುರಿಸಬೇಕಾಗುತ್ತದೆ. ಈ ಹದಿ ವಯಸ್ಸಿನಲ್ಲಿ ಯಾವಾಗಲೂ ವಿವೇಕಕ್ಕಿಂತ ಸಂಕಲ್ಪಶಕ್ತಿ, ಕ್ರಿಯಾಶೀಲತೆಯೇ ಹೆಚ್ಚಾಗಿರುತ್ತದೆಯೇನೋ! ಹಾಗಾಗಿ ನಾನು ಉಕ್ಕುವ ಉತ್ಸಾಹಕ್ಕೆ ಬ್ರೇಕ್ ಹಾಕುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆದರೆ ಆ ಕೆಲಸವನ್ನು ನನ್ನ ಸೋಮಾರಿತನ, ಅಶಿಸ್ತುಗಳು ನಿರ್ವಹಿಸುವುದರಿಂದ ನನಗೆ ಹೆಚ್ಚಿನ ಹಾನಿಯೇನೂ ಆಗಿಲ್ಲ!

ಪ್ರತಿದಿನ ಬ್ಲಾಗು ಬರೆಯಬೇಕು ಎಂಬುದರ ಹಿಂದೆ ಕೇವಲ ಬರಹದ ಪ್ರಮಾಣದ ಮೇಲಿನ ಮೋಹ ಕೆಲಸ ಮಾಡುತ್ತಿತ್ತು. ನನ್ನನ್ನು ಪ್ರಭಾವಿಸಿದ ಪತ್ರಕರ್ತನ ಹಾಗೆ ದಿನಕ್ಕಷ್ಟು ಪುಟ ಬರೆಯಬೇಕು, ವಾರಕ್ಕೆ ಇಷ್ಟು ಓದಬೇಕು ಎಂಬ ಅನುಕರಣೆಯ ಗುರಿಗಳನ್ನು ನನ್ನೆದುರು ಇರಿಸಿಕೊಂಡಿದ್ದೆ. ನನ್ನದಲ್ಲದ ಗುರಿಯೆಡೆಗೆ ಓಡುವ ಧಾವಂತ ಪಡುತ್ತಿದ್ದೆ. ನನ್ನದಲ್ಲದ ಹಸಿವಿಗೆ ಊಟ ಮಾಡುವ, ನನ್ನದಲ್ಲದ ಹೊಟ್ಟೆನೋವಿಗೆ ಔಷಧಿ ಕುಡಿಯುವ ಹುಂಬತನದ ಅರಿವೇ ಆಗಿರಲಿಲ್ಲ. ಒಬ್ಬ ಕವಿಯನ್ನೋ, ಲೇಖಕನನ್ನೋ, ಕಥೆಗಾರನನ್ನೋ, ಸಿನೆಮಾ ನಿರ್ದೇಶಕನನ್ನೋ, ಹೀರೋವನ್ನೋ ಪ್ರಾಣ ಹೋಗುವಷ್ಟು ಗಾಢವಾಗಿ ಪ್ರೀತಿಸುವುದು, ಆರಾಧಿಸುವುದು, ಅನುಕರಣೆಯಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುವುದು, ಅನಂತರ ಸ್ವಂತಿಕೆ ಕಳೆದುಕೊಂಡ ಅಭದ್ರತೆ ಕಾಡಿದಾಗ ಆ ಪ್ರೇರಣೆಯ ಮೂಲವನ್ನೇ ದ್ವೇಷಿಸಲು ತೊಡಗುವುದು ಇದೆಲ್ಲಾ ಯಾಕೆ ಬೇಕು? ಆದರೆ ಈ ಅರಿವು ಒಂದು ಅಚ್ಚಿನಲ್ಲಿ ಮೌಲ್ಡ್ ಆಗುವಾಗಿನ ಸುಖವನ್ನು, ಐಶಾರಾಮವನ್ನು ಅನುಭವಿಸುವಾಗ ಉಂಟಾಗುವುದಿಲ್ಲ. ಅದೇ ತಮಾಷೆಯ ಹಾಗೂ ದುರಂತದ ಸಂಗತಿ.

ವಿಪರೀತ ಬರೆಯಬೇಕು ಅನ್ನಿಸುವುದು ಸಹ ತುಂಬಾ ಮಾತಾಡಬೇಕು ಅನ್ನಿಸುವುದುರ ತದ್ರೂಪು ಭಾವವಾ? ಮಾತು ಹೇಗೆ ಚಟವಾಗಿ ಅಂತಃಸತ್ವವನ್ನು ಕಳೆದುಕೊಂಡು ಕೇವಲ ಶಬ್ಧವಾಗಿಬಿಡಬಲ್ಲುದೋ ಹಾಗೆಯೇ ಬರವಣಿಗೆಯು ಬರಡಾಗಬಲ್ಲದಾ? ವಿಪರೀತ ಬರೆಯಬೇಕು ಎಂದು ತೀರ್ಮಾನಿಸಿದವರು ವಾಚಾಳಿಯಾಗಿಬಿಡಬಲ್ಲರಾ? ಮನಸ್ಸಲ್ಲಿ ಕದಲುವ ಪ್ರತಿ ಭಾವವನ್ನೂ ಅಕ್ಷರಕ್ಕಿಳಿಸಿಬಿಡುವ, ಆ ಮೂಲಕ ತೀರಾ ಖಾಸಗಿಯಾದ ಭಾವವನ್ನು ಪ್ರದರ್ಶನದ ‘ಕಲೆ’ಯಾಗಿಸಿಬಿಡುವುದು ಒಳ್ಳೆಯದಾ? ಇವೆಲ್ಲಕ್ಕೂ ಉತ್ತರವನ್ನೂ ಸಹ ಅಕ್ಷರದ ಮೂಲಕವೇ ಕೇಳಿಕೊಳ್ಳುವ ಅನಿವಾರ್ಯತೆ ಇರುವುದು ನಮ್ಮ ಪರಿಸ್ಥಿತಿಯ ವ್ಯಂಗ್ಯವಲ್ಲವೇ? ನಮ್ಮೊಳಗಿನ ದನಿಗೆ ಅಭಿವ್ಯಕ್ತಿಕೊಡುವ ಮಾಧ್ಯಮವೂ ಕೂಡ ನಮ್ಮ ಚಟವಾಗಿಬಿಡಬಹುದೇ? ಅಕ್ಷರಗಳ ಮೋಹ ನಮ್ಮೊಳಗಿನ ದನಿಯನ್ನು ನಿರ್ಲಕ್ಷಿಸಿಬಿಡುವ ಅಪಾಯವಿದೆಯೇ? ಅಥವಾ ಇವೆಲ್ಲಕ್ಕೂ ಮನ್ನಣೆ, ಪ್ರಸಿದ್ಧಿ, ಹೆಸರುಗಳೆಂಬ ವಿಷಗಳು ಸೇರಿಕೊಂಡು ಬಿಟ್ಟಿವೆಯೇ?

ತುಂಬಾ ಬರೆಯುತ್ತಾ, ಯಾವಾಗಲೋ ಒಮ್ಮೆ ನಾನು ವಿಪರೀತ ವಾಚಾಳಿಯಾಗಿಬಿಟ್ಟೆನಾ ಅನ್ನಿಸತೊಡಗುತ್ತದೆ. ಅದರಲ್ಲೂ ಈ ಬ್ಲಾಗ್ ಬರಹಗಳಲ್ಲಿ ನನ್ನ ವೈಯಕ್ತಿಕ ಅನುಭವ, ವಿಚಾರ, ತಳಮಳಗಳನ್ನೇ ದಾಖಲಿಸುತ್ತಾ ಕೆಲವೊಮ್ಮೆ ನಾನು ಬರೀ ಮಾತುಗಾರನಾಗಿಬಿಟ್ಟೆನಾ ಎಂಬ ಭಯವಾಗುತ್ತದೆ. ನನ್ನ ಓದು ನಿಂತುಹೋಗಿಬಿಟ್ಟಿತಾ ಎಂಬ ಆತಂಕ ಕಾಡುತ್ತದೆ. ಈ ಸಕಲ ವ್ಯವಹಾರಗಳಿಗೂ ತಿಲಾಂಜಲಿಯಿತ್ತು ಕೆಲಕಾಲ ಎಲ್ಲಾದರೂ ಅಡಗಿಕೊಂಡು ಬಿಡಲಾ ಅನ್ನಿಸುತ್ತದೆ. ಬರೆಯುವುದನ್ನೆಲ್ಲಾ ಬಿಟ್ಟು ಓ ಹೆನ್ರಿಯ ಕಥೆಯಲ್ಲಿನ ಪಾತ್ರದ ಹಾಗೆ ಒಬ್ಬಂಟಿ ಕೋಣೆಯಲ್ಲಿ ಓದುತ್ತಾ, ಚಿಂತಿಸುತ್ತಾ, ಧ್ಯಾನಿಸುತ್ತಾ ಬದುಕು ಕಳೆದುಬಿಡಲಾ ಎನ್ನಿಸುತ್ತದೆ. ಹೀಗೆ ಬರೆಯುತ್ತಲೇ ಇದ್ದರೆ ನನ್ನ ತಿಳುವಳಿಕೆ, ಜ್ಞಾನ ಸೀಮಿತವಾಗಿಬಿಡುತ್ತದಾ ಎನ್ನಿಸುತ್ತದೆ. ಈ ಬಗೆಯ ಭಾವಗಳು ಕಾಡಿದಾಗ ಒಂದಷ್ಟು ದಿನ ಬ್ಲಾಗು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೇನೆ. ನಾವು ಗೆಳೆಯರು ನಡೆಸುತ್ತಿರುವ ಈ ಪತ್ರಿಕೆಗೆ ರಾಜೀನಾಮೆ ಕೊಟ್ಟುಬಿಟ್ಟಿದ್ದೇನೆ. ಒಂದೆರಡು ತಿಂಗಳು ಅದರಿಂದ ದೂರವಾಗಿಬಿಟ್ಟಿದ್ದೇನೆ. ಮತ್ತೆ ಅದನ್ನು ಅಪ್ಪಿಕೊಂಡಿದ್ದೇನೆ.

ಪರಿಸ್ಥಿತಿ ಬದಲಾಯಿಸಿತಾ? ಬ್ಲಾಗು ಬರೆಯುವುದನ್ನು ಬಿಟ್ಟಾಗ ನನಗೆ ತೃಪ್ತಿ ಸಿಕ್ಕಿತಾ? ಸಮಾಧಾನ ಎನ್ನುವುದು ಸಿಕ್ಕಿತಾ? ನನ್ನನ್ನು ನಾನು ನಿರಂತರವಾದ ಓದಿಗೆ, ಅಧ್ಯಯನಕ್ಕೆ ತೊಡಗಿಸಿಕೊಳ್ಳಲು ಸಾಧ್ಯವಾಯಿತಾ? ಖಂಡಿತಾ ಇಲ್ಲ. ಓದು ಅನ್ನೋದು ತೀರಾ ಖಾಸಗಿಯಾದ ಕ್ರಿಯೆಯೇ ಆದರೂ ಅದರಲ್ಲಿ ದೊರೆಯುವ ಸಂತೋಷವನ್ನು, ನಾನು ಕಂಡುಕೊಂಡ ಸಂಗತಿಗಳನ್ನು, ಅನುಭವಿಸಿದ ಬೆರಗನ್ನು ಹಂಚಿಕೊಳ್ಳಬೇಕು ಎನ್ನುವ ಹಂಬಲವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಬರೆಯುವಾಗ ನಾನು ಅದುವರೆಗೂ ಆಲೋಚಿಸಿರದಿದ್ದ ಅನೇಕ ಒಳನೋಟಕಗಳು ದಕ್ಕಿದಂತಾಗಿ ಪುಳಕಗೊಳ್ಳುವ ಸುಖವನ್ನು ಬಿಡಲು ಸಾಧ್ಯವಾಗುವುದಿಲ್ಲ. ಸೃಜನಶೀಲತೆಯಲ್ಲಿ ಸಿಕ್ಕುವ ಸಮಾಧಾನವನ್ನು ಕಳೆದುಕೊಂಡು ಇರುವುದು, ಪ್ರತಿದಿನ ರುಚಿ ರುಚಿಯಾಗಿ ತಿನ್ನುತ್ತಿದ್ದವನಿಗೆ ಒಮ್ಮೆಗೇ ಸಪ್ಪೆ ಊಟ ಹಾಕಲು ಶುರುಮಾಡಿದ ಹಾಗಾಗುತ್ತದೆ. ಬಹುಶಃ ಸ್ವಂತ ಅಭಿವ್ಯಕ್ತಿಗೆ, ನಮ್ಮವೇ ಆದ ಸೃಷ್ಠಿಗೆ ಯಾವ ಅವಕಾಶವನ್ನೂ ಕೊಡದೆ ಕೇವಲ ಹೊರಗಿನಿಂದ ಒಳಗೆ ಫೀಡ್ ಮಾಡಿಕೊಳ್ಳಬೇಕಾದ ನಮ್ಮ ಈ ಶಿಕ್ಷಣ ವ್ಯವಸ್ಥೆಯಿಂದಾಗಿ ಸಣ್ಣ ಸಣ್ಣ ಸೃಜನಶೀಲ ಕೆಲಸಗಳಲ್ಲೂ ಅಪಾರವಾದ ಖುಷಿ ಸಿಕ್ಕುತ್ತದೆಯೇನೋ! ಈ ಸಣ್ಣ ಖುಶಿ, ಅಹಂಕಾರಕ್ಕೆ ಸಿಕ್ಕುವ ಬೆಚ್ಚಗಿನ ಪ್ರೋತ್ಸಾಹಗಳನ್ನು ತೊರೆಯುವುದು ರಾಜಕಾರಣಿ ಕುರ್ಚಿಯ ಮೇಲಿನ ಆಸೆಯನ್ನು ಬಿಟ್ಟಂತೆಯೇ ಏನೋ! ಈ ನಮ್ಮ ಹಪಹಪಿಗೆ ಒಂದು ಗೌರವಯುತವಾದ ಸ್ಥಾನವಿದೆ ಆದರೆ ಅಧಿಕಾರದ ಮೇಲಿನ ಹಂಬಲಕ್ಕೆ ಅದಿಲ್ಲ ಅಷ್ಟೇ ವ್ಯತ್ಯಾಸ!

ಬ್ಲಾಗಿಂಗ್ ಕೂಡಾ ಚಟವಾಗುತ್ತಿದೆ ಎಂಬ ಇತ್ತೀಚಿನ ಕೆಲವು ಇಂಗ್ಲೀಷ್ ಪತ್ರಿಕೆಗಳ ವರದಿಗಳಲ್ಲಿನ ವೈಜ್ಞಾನಿಕ ಕಾರಣಗಳನ್ನು ಅವಲೋಕಿಸುವಾಗ ಇದೆಲ್ಲಾ ಹೊಳೆಯಿತು. ಆದರೆ ಇದನ್ನೆಲ್ಲಾ ಬರೆಯುತ್ತಾ ಹೋದಂತೆ ಹಲವು ಸಂಗತಿಗಳು ಸ್ಪಷ್ಟವಾಗುತ್ತಾ ಹೋದವು. ನಾವು ಬರೆಯುವುದು ನಮ್ಮೊಳಗೆ ಸ್ಪಷ್ಟತೆಯನ್ನು ಸ್ಥಾಪಿಸಿಕೊಳ್ಳುವುದಕ್ಕಾ?

ಜ್ಞಾನಮೂರ್ತಿ, ಬೆಂಗಳೂರು.

ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ,
ಧರಿತ್ರಿಯ ಸಂಗವ ತೊರೆಯುವ ಮುನ್ನ
ತಾಯ್ಮಡಿಲಿನಲಿ ಶಿರವನಿರಿಸಿ ನಾ ಅಲೆದಿರುವಾ
ನನ್ನ ನೆನಪಿನಂಗಳವನ್ನ ತವೆಯುತ್ತ
ತಾಯ್ಮಡಿಲ ಸೇರಿದ ನೆನಪಾಗಿ,

ಬಾಲ್ಯದ ತುಂಟಾಟ ಕೈಬೀಸಿದಂತಾಗಿ
ಗೆಳೆಯರ ಜಗಳ ಸಂಧಾನಗಳು ಕೂಗಿ ಕರೆದಂತಾಗಿ
ಕೈಹಿಡಿದ ಕೈಯನ್ನು ಹಿಡಿದು ನಡೆಸುವ ಹಂಬಲವಾಗಿ
ಮನಸು ಸಾವಿನ ದಾರಿಯಲಿ ತಾ ಹಿಂದೆ ನೋಡುತಿರೆ,
ವಾಸ್ತವಕೆ ಬಂದು ನಾ ಸುತ್ತ ನೋಡುತಿರೆ
ತೇವದಿ೦ದೆಲ್ಲರ ಕಂಗಳಲಿ ನನ್ನ ಬಿಂಬ
ಕಂಡು ಸಂತಸಗೊಂಡೆ ನಾ ಈ ಕ್ಷಣ

ಮಾತೃದೇವತೆಯ ಮಡಿಲ ತೊರೆಯಲಾಗುತ್ತಿಲ್ಲ
ಮಡದಿಯ ಸಿಂಧೂರ ನೋಡಲಾಗುತ್ತಿಲ್ಲ.
ಕಾಲಚಕ್ರವ ಹಾಗೆ ಹಿಂದೆ ಸರಿಸುವ ಆಸೆ,
ಅಮ್ಮಾ ನಿನ್ನ ಮಡಿಲಲಿ ನಾ ಮತ್ತೆ ಶಿಶುವಾಗುವಾಸೆ
ಬಾಳೆಂಬ ನಾಣ್ಯದ ಎರಡನೇ ಮುಖವ ನೋಡುವ ಸಮಯ
ಓಗೊಟ್ಟು ಸ್ವೀಕರಿಸಲೇಬೇಕು ಜವರಾಯನ ಈ ಕರೆಯ

ಕಣ್ಣಾಲಿಗಳು ತೇಲುತಿರೆ, ಉಸಿರಾಟ ನಿಲ್ಲುತಿರೆ,
ಹೃದಯವಿದು ತನ್ನ ಬಡಿತವಾ ತಾನು ನಿಲ್ಲಿಸಿರೆ,
ಕಣ್ಣ ರೆಪ್ಪೆಯಲೇ ಕಡೆಯ ನಮನವಾ ತಿಳಿಸಿ
ಹೋಗುತಿರುವೆ ನಾ……..
ಜವರಾಯನ ಗೆದ್ದು ಜೀವಿಸಲೇ ಬೇಕೆಂದು ಏಕನಿಸಿತೋ ಕಾಣೆ
ಹೋಗುವ ಮುನ್ನ, ಹೋಗುವಾ ಮುನ್ನ……

– ರೇಶ್ಮಾ, ಉತ್ತರ ಕನ್ನಡ.

 ಹೊರಗೆ ಬಿಸಿಲಿಲ್ಲ. ಕಪ್ಪು ಮೋಡ. ಇನ್ನೇನು, ಕ್ಷಣಗಳಲ್ಲಿ ಮಳೆ ಶುರುವಾಗತ್ತೆ. ಒಳಗೆ ಎಷ್ಟು ಕೂಗಿಕೊಂಡರೂ ಕೇಳಿಸದ ಹಾಗೆ ಧೋ.. ಅಂತ ಸುರಿವ ಮಳೆ. ಕಿಟಕಿ, ಬಾಗಿಲು ಮುಚ್ಚಿ ಕುಳಿತರೆ ಕೊನೆಗೆ ವೆಂಟಿಲೇಟರ್ ನಲ್ಲಾದರೂ ನುಸುಳಿ ಒಳ ಬಂದು ಥಂಡಿ ಹುಟ್ಟಿಸುವ ಗಾಳಿ. ಅವನೂ ಇದ್ದಿದ್ದರೆ ಚೆನ್ನಾಗಿರ್ತಿತ್ತು.

     ತುಂಬಾ ಚಳಿಯಾಗುತ್ತಿದೆ. ಬಿಸಿಯಾಗಿ ಏನಾದರೂ  ಹೊಟ್ಟೆಗೆ ಬೇಕು ಅನಿಸ್ತಿದೆ. ಒಬ್ಬಳೇ ಮಾಡಿಕೊಂಡು ಕುಡೀಬೇಕಲ್ಲ ಅಂತ ಸ್ವಲ್ಪ ಉದಾಸೀನ. ಆದರೂ ಬೇಕು ಅನ್ನುತ್ತಿದೆ ಮನಸ್ಸು. ಲೋಟದ ತುಂಬ ಬಿಸಿ ಬಿಸಿ ಕಾಫಿ ಮಾಡಿಕೊಂಡು ಬಾಲ್ಕನಿಗೆ ಬರುವಾಗ ಹೊರಗೆ ಮಳೆ ಇನ್ನೂ ಅದೇ ಆವೇಶದಲ್ಲಿ ಸುರಿಯುತ್ತಿದೆ. ಅವನು ಇದ್ದಿದ್ದರೆ ಬರೀ ಕಾಫಿ ನಾ? ಏನಾದ್ರೂ ತಿಂಡಿ ಪ್ಲೀಸ್ ಮುಖ ಚಿಕ್ಕದು ಮಾಡುತ್ತಿದ್ದ. ಈಗ ತಿಂಡಿ ಮಾಡಬೇಕು ಅನಿಸ್ತಿಲ್ಲ. ಅವನು ಇವತ್ತಷ್ಟೇ ಹೋಗಿದ್ದಾನೆ, ಬರೋಕೆ ಒಂದು ವಾರ ಬೇಕು ಅನ್ನೋದು ಗೊತ್ತಿದ್ದರೂ ಮತ್ತೆ ಮತ್ತೆ ಅವನ ಬರವು ಕಾಯುತ್ತಾ ರಸ್ತೆ ನೋಡುವುದು. ಅವನಿಲ್ಲದೆ ಒಂದು ಕ್ಷಣ ಕಳೆಯೋದು ಸಹ ಕಷ್ಟ ಆಗ್ತಿದೆ. ಮಳೆ ಬರುತ್ತಿರುವಾಗ ಅವನಿರಬೇಕಿತ್ತು ಜೊತೆಗೆ. ಅಲ್ಲಿ ಈಗ ಏನು ಮಾಡ್ತಿರಬಹುದು? ಒಮ್ಮೆ ಫೋನ್ ಮಾಡಿ ಮಾತಾಡಿದರೆ ಹೇಗೆ? ಬೇಡ, ಮೆಸೇಜ್ ಮಾಡಿದ್ರೇ ಒಳ್ಳೇದು. ಮೀಟಿಂಗ್ ನಲ್ಲಿದ್ದರೆ ಡಿಸ್ಟರ್ಬ್ ಆಗೋದಿಲ್ಲ.

     ಮೆಸೇಜ್ ಮಾಡಿ ಹತ್ತು ನಿಮಿಷಗಳಾದರೂ ಉತ್ತರವಿಲ್ಲ. ಬಹುಶಃ ನಿದ್ರೆ ಮಾಡ್ತಿರಬಹುದು ಅನಿಸಿದ್ದೇ ಅವನು ಮಲಗುವ ರೀತಿ ನೆನಪಿಗೆ ಬಂತು. ಥೇಟ್ ಚಿಕ್ಕ ಮಕ್ಕಳ ಹಾಗೇ.. ಪ್ರಶಾಂತವಾದ ಮುಖ, ತುಂಟ ಕಣ್ಣುಗಳು.. ಅವನು ಮನೆಯಲ್ಲಿದ್ದರೆ ಒಂದು ನಿಮಿಷವೂ ಬಿಡುವೇ ಸಿಗುವುದಿಲ್ಲ. ಅಮ್ಮ, ಅಪ್ಪನಿಗೆ ಅಂತ ಹೀಗೆ ಒಮ್ಮೆಯಾದರೂ ಹೀಗೇ ಕಾಯುತ್ತಾ ನಿಂತಿದ್ದು ನೆನಪಿಗೆ ಬರುತ್ತಿಲ್ಲ. ಹಳ್ಳಿ ಮನೆಯ  ಮುಗಿಯದ ಕೆಲಸಗಳ ಜೊತೆ ಮಕ್ಕಳ ಗಲಾಟೆ ಸುಧಾರಿಸುತ್ತಿದ್ದವಳಿಗೆ ಅಪ್ಪನಿಗೆ ಕಾಯುತ್ತಾ ನಿಲ್ಲಲು ಪುರುಸೊತ್ತೆಲ್ಲಿರ್ತಿತ್ತು?
ಆಗಾಗ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುವವಳಿಗೆ ಅಮ್ಮನ ನೆನಪಲ್ಲಿ ಕಣ್ತುಂಬಿ ಬರುತ್ತೆ. ಟಿ. ವಿ ನೋಡುತ್ತಾ ಕುಳಿತವನಿಗೆ ಅದು ಹೇಗೆ ಗೊತ್ತಾಗುತ್ತೋ, ಪಕ್ಕದಲ್ಲಿ ಹಾಜರ್. ಅವನನ್ನು ನೋಡುತ್ತಿದ್ದ ಹಾಗೇ ನಿಯಂತ್ರಿಸಿಕೊಳ್ಳಲಾಗದೇ ಕಣ್ಣೀರ ಹೊಳೆಯೇ ಹರಿದುಬಿಡುತ್ತೆ. ಆಗ ಎದೆಗೊರಗಿಸಿಕೊಂಡು, ನಾಳೆ ಅಮ್ಮನ್ನ ನೋಡ್ಕೊಂಡು ಬರೋಣ ಅನ್ನುತ್ತಾನೆ.

    ಅರೇ.. ಮೆಸೇಜ್ ಬಂತು, ಅವನದ್ದೇ. ನಿದ್ರೆ ಮಾಡಿದ್ದೆ. ನಂತರ ಕಾಲ್ ಮಾಡ್ತೀನಿ.  ದೂರ ಇದ್ದರೂ ಮೆಸೇಜ್ ಮಾಡೋವಾಗ, ಫೋನನಲ್ಲಿ ಮಾತಾಡೋವಾಗ ಒಮ್ಮೆಯೂ ಮಿಸ್ ಯೂ ಅಂತ ಹೇಳಿದ್ದಿಲ್ಲ. ಕಾಲ್ ಮಾಡಿದ ತಕ್ಷಣ ಕೇಳ್ತಾನೆ, ಅಲ್ಲಿ ಮಳೆ ಇದ್ಯಾ?. ಅವನಿಗೂ ಸಹ ಮಳೆ ಅಂದ್ರೆ ಇಷ್ಟ. ಅರೇ ಮಳೆ ಕಡಿಮೆಯಾಗಿಬಿಡ್ತು. ಎಲ್ಲೋ ನೋಡುತ್ತಾ ಲೋಟ ಬಾಯಿಗಿಟ್ಟರೆ, ಕಾಫಿಯೂ ಖಾಲಿ. 

ರಂಜಿತ್ ಅಡಿಗ, ಕುಂದಾಪುರ

ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.

ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, ನೆನಪುಗಳು ಸುಡುವ ಅವಕಾಶ ಇಲ್ಲವಾಗುತಿತ್ತಲ್ಲವೇನೆ ಗೆಳತೀ?

ಹಾಗೆ ಅಷ್ಟು ನಿರ್ದುಷ್ಟವಾಗಿ ಹೋಗುವಾಗ, ವಿಲವಿಲ ಒದ್ದಾಡುವ ಹೃದಯವನ್ನು ನೇವರಿಸುವಂತಹ ಪುಟ್ಟನೋಟವೊಂದನ್ನು ಇತ್ತು ಹೋಗಿದ್ದರೆ ಜನುಮದ ಕ್ಷಣಗಳನ್ನೆಲ್ಲಾ ಅದರ ತೆಕ್ಕೆಯಲ್ಲಿ ಹಾಕಿ ಖುಷಿಯಿಂದ ಕಳೆದುಬಿಡುತ್ತಿದ್ದೆ. ’ನಿನ್ನದೇನೂ ತಪ್ಪಿಲ್ಲ; ಏನೋ ಸಮಸ್ಯೆಯಿಂದಾಗಿ ಹೊರಟಿದ್ದೀ, ಬದುಕಿನ ಯಾವುದೋ ಒಂದು ಸುಂದರ ತಿರುವಿನಲ್ಲಿ ನನಗಾಗಿ ಕಾಯುತಿರುತ್ತೀ’ ಎಂಬ ಭ್ರಮೆಯನ್ನು ಸತ್ಯವೆಂದೇ ಮನಸ್ಸಿಗೆ ನಂಬಿಸುತ್ತಾ ಅಂತಿಮವಾಗಿ ಸಾವಿನ ತಿರುವು ಬರುವವರೆಗೂ ಕಾಲ ಕಳೆಯುತ್ತಿದ್ದೆ. ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.

ಹಾಗಾಗಲಿಲ್ಲ.

ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು.

ಹಾಗೆ ಹೊರಟುಹೋಗಲು ಕಾರಣವಾದರೂ ಏನಿತ್ತು? ಕೇಳೋಣ ಅಂದುಕೊಂಡಿದ್ದೆ.

ಕೇಳಿಯೇ ಬಿಟ್ಟಿದ್ದರೆ ಮತ್ತೊಂದು ಅನಾಹುತವಾಗುತಿತ್ತು. ಮೊದಲಿಂದಲೂ ಆಸೆಪಟ್ಟದ್ದನ್ನು ಪಡೆದೇ ಅಭ್ಯಾಸ. ಅಮ್ಮನ ಖಾಲಿ ಕೈಗೆ ವಾಚು ಉಡುಗೊರೆ ಮಾಡಬೇಕೆಂದು ಯಾವಾಗನ್ನಿಸಿತ್ತೋ ಅದೇ ದಿನ ಮನೆಮನೆಗೆ ಪೇಪರ್ ಹಾಕಿ ಹಾಲಿನ ಪ್ಯಾಕೆಟ್ಟೆಸೆದು ತಿಂಗಳು ಮುಗಿಯುವುದರೊಳಗೆ ಟೈಟನ್ ವಾಚು ತಂದುಕೊಟ್ಟಿರಲಿಲ್ಲವೇ?

ಕುಡುಮಿ ವಿಧ್ಯಾರ್ಥಿಯೊಬ್ಬನಿಗಿಂತ ಜಾಸ್ತಿ ಮಾರ್ಕ್ಸು ಪಡೆಯಲೇಬೇಕೆಂದು ಯಾವಾಗನ್ನಿಸಿತ್ತೋ ಆಗೆಲ್ಲಾ ನಿದಿರಿಸುವುದೇ ಕಾಲಹರಣ ಅನ್ನಿಸತೊಡಗಿತ್ತಲ್ಲವ? ಮುಂದಿನ ಪರೀಕ್ಷೆಯಲ್ಲಿಯೇ ಹೆಚ್ಚು ಅಂಕ ಗಳಿಸಿ ತೋರಿಸಿರಲಿಲ್ಲವೇ?

ಹಾಗೆಯೇ (ನೀನೆಲ್ಲಾದರೂ ನನ್ನ ದುಃಖ ಕಡಿಮೆಯಾಗುತ್ತದೆಂದು ಊಹಿಸಿ ಸುಳ್ಳಿಗಾದರೂ) ತೊರೆಯಲು ಏನೋ ಒಂದು ಕಾರಣ ಹೇಳಿದ್ದರೆ ಅದನ್ನು ಜಯಿಸಲು ನನಗೆಷ್ಟು ಸಮಯ ಬೇಕಾಗುತಿತ್ತು ಹೇಳು? ಅದಕ್ಕೇ ಕಾರಣ ಕೇಳುತ್ತಿದ್ದ ಮನದ ಕತ್ತನ್ನು ಹಿಸುಕಿ ಮೌನವಾಗಿಸಿದೆ.

ಇನ್ನು ಮುಂದೇನೂ ಇಲ್ಲ. ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ. ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ. ಜೀವ ಬಸಿದು ಪದಗಳಾಗುತಿರಲು ಬರೆಯಲೂ ಕೈ ನಡುಗುತಿದೆ ; ಬಹುಶಃ ನಿನ್ನ ಮೇಲೆ, ಬದುಕಿನ ಮೇಲೆ, ಪ್ರೀತಿಯ ಮೇಲೆ ಮತ್ತು ದೇವರ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು.

ಓದಿ, ಲೊಚಗುಟ್ಟಿಯೋ, ಕನಿಕರಿಸಿಯೋ, ಧಿಕ್ಕರಿಸಿಯೋ, ನೇವರಿಸಿಯೋ, ಹರಿದು ಹಾಕಿಯೋ, ಫ್ರೇಮ್ ಹಾಕಿಸಿಯೋ, ಮದುವೆ ಅಲ್ಬಮ್ಮಿನ ಫೋಟೋ ಹಿಂದುಗಡೆ ಯಾರಿಗೂ ಕಾಣದಂತಿರಿಸಿಯೋ, ಚಿಂದಿ ಮಾಡಿ ಕಸದ ಬುಟ್ಟಿಗೆಸೆದೋ….

ಸಾರ್ಥಕವಾಗಿಸು.

Blog Stats

  • 72,886 hits
ಏಪ್ರಿಲ್ 2024
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  

Top Clicks

  • ಯಾವುದೂ ಇಲ್ಲ